ಮಹಿಳಾ ವಿರೋಧಿ ಕಾಂಗ್ರೆಸ್‌ಗೆ ಪಾಠಕಲಿಸೋಣ

ಹೊಸಪೇಟೆಯಲ್ಲಿ ಶನಿವಾರ ನಾರಿಶಕ್ತಿ ವಂದನಾ ಮಸೂದೆಗೆ ವಿರೊಧಿಸಿ ಕಾಂಗ್ರೆಸ್ ವಿರೋಧಿಸಿ ಬಿಜೆಪಿ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಹಿಳಾ ಮೋರ್ಚಾದ ಅಧ್ಯಕ್ಷೆ ಆರುಂಡಿ ಸುವರ್ಣ, ನಗರಸಭೆಯ ಮಾಜಿ ಅಧ್ಯಕ್ಷೆ ಸುಂಕಮ್ಮ, ಪ್ರಮುಖರಾದ ಇಮ್ತಿಯಾಜ್, ಉಮಾದೇವಿ ಇತರರಿದ್ದರು.
ಹೊಸಪೇಟೆಯಲ್ಲಿ ಶನಿವಾರ ನಾರಿಶಕ್ತಿ ವಂದನಾ ಮಸೂದೆಗೆ ವಿರೊಧಿಸಿ ಕಾಂಗ್ರೆಸ್ ವಿರೋಧಿಸಿ ಬಿಜೆಪಿ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಹಿಳಾ ಮೋರ್ಚಾದ ಅಧ್ಯಕ್ಷೆ ಆರುಂಡಿ ಸುವರ್ಣ, ನಗರಸಭೆಯ ಮಾಜಿ ಅಧ್ಯಕ್ಷೆ ಸುಂಕಮ್ಮ, ಪ್ರಮುಖರಾದ ಇಮ್ತಿಯಾಜ್, ಉಮಾದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾದ ವಿಜಯನಗರ ಅಧ್ಯಕ್ಷೆ ಆರುಂಡಿ ಸುವರ್ಣ ಕರೆ
ಹೊಸಪೇಟೆ: ಕೇಂದ್ರದ ಸರ್ಕಾರ ಸಂಸತ್‌ನಲ್ಲಿ ಮಂಡಿಸಿದ್ದ ನಾರಿಶಕ್ತಿ ವಂದನಾ ಮಸೂದೆಗೆ ಅಡ್ಡಿಪಡಿಸುವ ಮೂಲಕ ದೇಶದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದು ಮಹಾದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಮತ್ತವರ ಬೆಂಬಲಿಗ ಪಕ್ಷಗಳನ್ನು ಚುನಾವಣೆಯಲ್ಲಿ ಬಹಿಷ್ಕರಿಸುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾದ ಅಧ್ಯಕ್ಷೆ ಆರುಂಡಿ ಸುವರ್ಣ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ವಿಧೇಯಕ ಮಂಡಿಸಲಾಗಿದ್ದು ಈ ವಿಧೇಯಕ ಸೋಲಿಗೆ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ದ ಮಹಿಳೆಯರು ಹೋರಾಟ ನಡೆಸುವುದು ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಹಿಷ್ಕರಿಸಬೇಕು. ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್‌ನ ಸಿದ್ದಾಂತವಾಗಿದೆ, ಇಂತಹ ಸಂದರ್ಭದಲ್ಲಿ ಮಹಿಳೆಯರು ಏಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ದಶಕಗಳ ಕಾಲದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಮೂಲೆ ಗುಂಪು ಮಾಡಿದ್ದ ಕಾಂಗ್ರೇಸ್ ಪಕ್ಷ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಇಚ್ಚಾಶಕ್ತಿ ಹಾಗೂ ಮಹಿಳೆಯರ ಮೇಲಿನ ಗೌರವದಿಂದ ಸಂಸತ್‌ನಲ್ಲಿ ನಾರಿಶಕ್ತಿ ವಂದನ್ ಮಸೂದೆ ಮೂಡಿಸಿದಾಗ ಅದನ್ನು ವಿರೋಧಿಸುವ ಮೂಲಕ ಕೀಳು ಮಟ್ಟದ ರಾಜಕೀಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದಾರೆ ಎಂದರು.
ಪ್ರಧಾನಿ ಮೋದಿಯವರು ನಾರಿಶಕ್ತಿ ವಂದನ್ ಮಹಿಳೆಯರಿಗೆ ವಂದಿಸುವ ಪ್ರತೀಕವಾಗಿ ಮಸೂದೆ ಮಂಡಿಸಿದ್ದು, ಬಿಜೆಪಿಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಆದರೆ ಕಾಂಗ್ರೆಸ್ ಮುಖಂಡರು ಇದಕ್ಕೆ ಧಕ್ಕೆ ತಂದು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದರು, ಇದೇ ಕಾಂಗ್ರೆಸ್ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಹಿಳೆಯರು ಕಾಂಗ್ರೆಸ್ ಮಾಡಿರುವ ಈ ಮಹಾದ್ರೋಹದ ಕುರಿತು ಎಚ್ಚೆತ್ತುಕೊಳ್ಳಬೇಕು, ಬೀದಿಗಿಳಿದು ಹೋರಾಟ ಮಾಡುವ ಸಂಕಲ್ಪ ಮಾಡಬೇಕು, ನಿಮ್ಮೊಂದಿಗೆ ಬಿಜೆಪಿ ಮಹಿಳಾ ಮೋರ್ಚಾ ಸದಾ ನಿಲ್ಲುತ್ತದೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ನಗರಸಭೆಯ ಮಾಜಿ ಅಧ್ಯಕ್ಷೆ ಸುಂಕಮ್ಮ, ಪ್ರಮುಖರಾದ ಇಮ್ತಿಯಾಜ್, ಉಮಾದೇವಿ, ಪೂರ್ಣಿಮಾ, ಶೋಭಾ, ಶೈಲಜಾ ಭವಾನಿ, ರೇಖಾ, ನಾಗರತ್ನಮ್ಮ, ವಿಜಯಲಕ್ಷ್ಮಿ, ಹೇಮಾ,ಕಮಲ, ರೇಣುಕಾ ಗವಿ, ಮೀರಾಬಾಯಿ, ಅನುರಾಧ, ಚೆನ್ನವೀರಮ್ಮ, ಸೌಮ್ಯ, ಪಾರ್ವತಿ, ಕುಸುಮ, ಮಸ್ತಾನಿ, ಸುಮಯ್ಯ, ಹುಸೇನ್ ಬಾನು, ಸಬಿಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net