ವಿಪತ್ತು ಸಂಭವಿಸದಿರಲಿ ಎಂದು ಪ್ರಾರ್ಥಿಸೋಣ

ಹೊಸಪೇಟೆ ಅಗ್ನಿಶಾಮಕ ಠಾಣೆಯಲ್ಲಿ ನೂತನ ಅಗ್ನಿಶಾಮಕ ವಾಹನವನ್ನು ಶಾಸಕ ಎಚ್.ಆರ್.ಗವಿಯಪ್ಪ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
ಹೊಸಪೇಟೆ ಅಗ್ನಿಶಾಮಕ ಠಾಣೆಯಲ್ಲಿ ನೂತನ ಅಗ್ನಿಶಾಮಕ ವಾಹನವನ್ನು ಶಾಸಕ ಎಚ್.ಆರ್.ಗವಿಯಪ್ಪ ಸಾರ್ವಜನಿಕ ಸೇವೆಗೆ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಅಗ್ನಿಶಾಮಕ ವಾಹನಕ್ಕೆ ಚಾಲನೆ ನೀಡಿ ಶಾಸಕ ಎಚ್.ಆರ್.ಜಿ. ಹೇಳಿಕೆ

ಹೊಸಪೇಟೆ: ಅಗ್ನಿಶಾಮಕ ಸಿಬ್ಬಂದಿಗಳ ಬೇಡಿಕೆಯಾಗಿದ್ದ ನೂತನ ಅಗ್ನಿಶಾಮಕ ವಾಹನವನ್ನು ಒದಗಿಸಲಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.

ನಗರದ ಅಗ್ನಿಶಾಮಕ ಠಾಣೆಯಲ್ಲಿ ನೂತನ ಅಗ್ನಿಶಾಮಕ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು.

ಕೆಲ ವರ್ಷಗಳಿಂದಲೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಹೊಸ ವಾಹನ ಇರಲಿಲ್ಲ. ಹಳೆಯ ವಾಹನದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅತಿತುರ್ತು ಸಮಯದಲ್ಲಿ ಬೇರೆಡೆಯಿಂದ ಅಗ್ನಿಶಾಮಕ ವಾಹನವನ್ನು ತರಿಸಿಕೊಂಡು ಕಾರ್ಯಾಚರಣೆ ಮುಗಿಸಿ ವಾಹನವನ್ನು ವಾಪಸ್ ಕಳುಹಿಸಬೇಕಾದ ಪರಿಸ್ಥಿತಿ ಇತ್ತು.

ಇದನ್ನು ಮನಗಂಡು ಸಂಬAಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ ಹಿನ್ನೆಲೆಯಲ್ಲಿ ಒಂದು ಹೊಸ ಅಗ್ನಿಶಾಮಕ ವಾಹನವನ್ನು ಒದಗಿಸಲಾಗಿದೆ. ಹೊಸ ವಾಹನದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಲಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ಬೆಂಕಿ, ನೀರು ಗ್ಯಾಸ್, ವಿದ್ಯುತ್ ಅವಘಢಗಳು ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net