ಹೊಸಪೇಟೆಯಲ್ಲಿ ಚಿತ್ತವಾಡಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಶಂಕರ್‌ನಾಯ್ಕ ಮಾತ್ರೆ ನುಂಗುವ ಮೂಲಕ ಚಾಲನೆ ನೀಡಿದರು. ಟಿಎಚ್‌ಒ ಡಾ.ವಿನೋದ್ ಕುಮಾರ್, ಸಿಡಿಪಿಒ ಸಿಂಧು ಅಂಗಡಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಧರ್ಮನಗೌಡ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಡಿಡಿಪಿಯು ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್, ಕಾಲೇಜಿ ಪ್ರಾಂಶುಪಾಲ ಬಿ.ವಿ.ಶ್ರೀಧರ್ ಇತರರಿದ್ದರು.
ಚಿತ್ತವಾಡಗಿ ಪಿಯು ಕಾಲೇಜಿನಲ್ಲಿ ಡಿಎಚ್‌ಓ ಡಾ.ಶಂಕರ್ ನಾಯ್ಕ ಕರೆ
ಹೊಸಪೇಟೆ: ಜಿಲ್ಲೆಯಾದ್ಯಂತ 4,83,776 ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡಲು ಗುರಿ ಹೊಂದಲಾಗಿದೆ ಎಂದು ಡಿಎಚ್‌ಒ ಡಾ.ಶಂಕರ್ ನಾಯ್ಕ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಚಿತ್ತವಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಶಾಲಾ ಕಾಲೇಜು, ಅಂಗನವಾಡಿಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುತ್ತದೆ. ಅದೇ ರೀತಿ ಇದರಿಂದ ಹೊರಗುಳಿದ ಮಕ್ಕಳಿಗೆ ಫೆ.16ರಂದು ಮಾಪ್ ಆಪ್ ದಿನ ಆಚರಣೆ ಮಾಡುವ ಮೂಲಕ ಎಲ್ಲರಿಗೂ ನೀಡಲಾಗುತ್ತದೆ. ಇದು ನುಂಗುವ ಮಾತ್ರೆಯಲ್ಲ ಚೀಪುವ ಮಾತ್ರೆಯಾಗಿದೆ. ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ ಮಾನಸಿಕ ಮತ್ತು ದೈಹಿಕ ಸಾಮಾರ್ಥ್ಯ ಹೆಚ್ಚಾಗುದರ ಜತೆಗೆ ಏಕಾಗ್ರತೆ ವೃದ್ಧಿಸಲಿದೆ. 6 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಮಾತ್ರೆಯನ್ನು ಸೇವಿಸಬೇಕು. ಆರೋಗ್ಯಯುತ ಜೀವನದ ನಡೆಸಲು ಸಹಕಾರಿಯಾಗಲಿದೆ ಈ ಮೂಲಕ ಜಿಲ್ಲೆಯನ್ನು ಜಂತುಹುಳು ಮುಕ್ತ ಜಿಲ್ಲೆಯಾಗಿಸೋಣ ಎಂದರು.
ಆರ್‌ಸಿಎಚ್‌ಒ ಡಾ.ಜಂಬಯ್ಯ ನಾಯಕ ಮಾತನಾಡಿ, ಪ್ರತಿ 6 ತಿಂಗಳಿಗೊಮ್ಮೆ ನಿವಾರಣಾ ಮಾತ್ರೆಯನ್ನು ನೀಡಲಾಗುತ್ತದೆ. 19 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಇದರಿಂದ ರಕ್ತ ಹೀನತೆ, ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದರು.
ಟಿಎಚ್‌ಒ ಡಾ.ವಿನೋದ್ ಕುಮಾರ್, ಸಿಡಿಪಿಒ ಸಿಂಧು ಅಂಗಡಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಧರ್ಮನಗೌಡ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಡಿಡಿಪಿಯು ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್, ಕಾಲೇಜಿ ಪ್ರಾಂಶುಪಾಲ ಬಿ.ವಿ.ಶ್ರೀಧರ್ ಇತರರಿದ್ದರು.