ಹೊಸಪೇಟೆಯಲ್ಲಿ ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಬಿಎಸ್ ವೈ ಅಭಿಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೋಗೊ ಬಿಡುಗಡೆ ಮಾಡಿದರು. ಶಾಸಕರಾದ ಗೊವಿಂದ್ ಕಾರಜೋಳ, ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮಲು ಇತರರಿದ್ದರು.
ಬಿಎಸ್‌ವೈ ಅಭಿಮಾನೋತ್ಸವ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಬಿ.ವೈ.ವಿಜಯೇಂದ್ರ ಕರೆ
ಹೊಸಪೇಟೆ: ರಾಜ್ಯದಲ್ಲಿ ಬಡವರ, ರೈತರ, ಶೋಷಿತ ಪರವಾಗಿ ಹೋರಾಟ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಪಯಣ ಐದು ದಶಕ ಕಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮದ ನಿಮಿತ್ತ ನಗರದ ಬಿಜೆಪಿ ಕಚೇರಿಯಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರಮುಖರ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚಿತ್ರದುರ್ಗದಲ್ಲಿ ನಡೆಯುವ ಬಿಎಸ್ ವೈ ಅಭಿಮಾನೋತ್ಸವ ಸುವರ್ಣಾಕ್ಷರದಲ್ಲಿ ಬೆರೆದಿಡುವ ಕಾರ್ಯಕ್ರಮ ಇದಾಗಲಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜ್ಯದ ನಾನಾ ಸಮುದಾಯಗಳ ಮಠಾಧೀಶರು ಸೇರಿದಂತೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜನರ ಆಶೀರ್ವಾದದಿಂದ ಬಿಎಸ್ ವೈ ಅವರು ರಾಜ್ಯದ ನಾಲ್ಕು ಬಾರಿ ಸಿಎಂ ಆದಂತ ಕಿರ್ತಿ ಅವರಿಗೆ ಸಲ್ಲುತ್ತದೆ. ಬಿ.ಎಸ್ ವೈ ಅವರಂತೆ ನನ್ನನ್ನು ನೋಡುವಂತ ಜನರು ಕೂಡ ಈ ಸಮಾಜದಲ್ಲಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಬಿಎಸ್ ವೈಯಂತೆ ಪ್ರೀತಿ ವಿಶ್ವಾಸ ಉಳಿಸುವ ಕೆಲಸ ನಾನು ಮಾಡುವೆ. ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ದೊಡ್ಡಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಯಶಸ್ವಿಗೊಳಿಸಬೇಕು. ಕಾರ್ಯಕ್ರಮಕ್ಕೆ ಬರುವ ಜನರಿಗೆ ಬಿಸಲಿ ತಾಪ ತಣಿಯಲು ಮಂಜಿನ ರೀತಿಯಲ್ಲಿ ವಾತವರಣ ನಿರ್ಮಾಣ ಮಾಡಲಾಗಿದೆ. ಮುಂದಿನ ರಾಜಕೀಯ ಭವಿಷ್ಯ ಬದಲಾವಣೆ ಮಾಡುವ ಶಕ್ತಿ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಇದೆ ಎಂದರು.
ರಾಜ್ಯ ಸರ್ಕಾರ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದರೆ, ಯಾವುದೇ ದುಶ್ಚಟಗಳಿಲ್ಲದ ವ್ಯಕ್ತಿಯನ್ನು ಪೊಲೀಸರು ಹಿಡಿದು ಡ್ರಗ್ಸ್ ಕೇಸ್ ಹಾಕಿದ್ದಾರೆ. ಅವರ ಕುಟುಂಬದಿAದ ಐವತ್ತು ಸಾವಿರ ವಸೂಲಿ ಮಾಡಿದಂತ ಪ್ರಕರಣ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಇದು ಮಾತ್ರವಲ್ಲದೇ ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿದೆ. ಇದರಿಂದ ಬಡವರು, ಅಸಹಾಯಕರು ತತ್ತರಿಸಿ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಗೆಟ್ಟಿದೆ. ಕಾಂಗ್ರೆಸ್ ಗೆ ಹಿಡಿ ಶಾಪ ಹಾಕುವುದರ ಜತೆ ಬಿಜೆಪಿಗೆ ಎಚ್ಚರಿಸುವ ಸುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ನಾಯಕರುಗಳ ಕಚ್ಚಾಡುವ ಬದಲು ಒಗ್ಗಟಾಗಿ ನಮ್ಮ ಅಭ್ಯಾರ್ಥಿಗಳನ್ನು ಗೆಲ್ಲಿಸಿ, ಸುಸ್ಥಿರ ಸರ್ಕಾರಕ್ಕೆ ಕೈ ಜೋಡಿಸೋಣ ಎಂದರು.