ಕಾನಹೊಸಹಳ್ಳಿ: ಜೀವನ ನಿರ್ವಹಣೆಗಾಗಿ ನಿತ್ಯ ದುಡಿಯುವ ಕಾರ್ಮಿಕರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಿ.ಟಿ.ಗುದ್ದಿ ಚಂದ್ರು ತಿಳಿಸಿದರು.
ಗ್ರಾಮದಲ್ಲಿ ಕೂಡ್ಲಿಗಿ ತಾಲೂಕು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಂಘದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನಿತ್ಯ ಕಾರ್ಮಿಕ ವರ್ಗದ ದುಡಿಮೆಯಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ.ಇಲ್ಲವಾದರೆ ದೇಶದ ಅಭಿವೃದ್ಧಿ ಶೂನ್ಯವಾಗಲಿದೆ. ಇಂತಹ ಶ್ರಮಿಕ ವರ್ಗ ಮತ್ತು ಅವರ ಕುಟುಂಬಕ್ಕೆ ಆರೋಗ್ಯ, ಶೈಕ್ಷಣಿಕ, ಅರ್ಥಿಕ ಯೋಜನೆ ಜಾರಿಗೆ ತರಬೇಕು. ಈಗ ಜಾರಿಯಾಗಿರುವ ಯೋಜನೆಗಳು ಪ್ರಬಲ ಕಾರ್ಮಿಕ ವರ್ಗಕ್ಕೆ ಸೀಮಿತವಾಗಿದೆ. ಎಲ್ಲ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.