ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗೋಣ

ಕಮಲಾಪುರದ ಪ್ರೌಢಾಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದಿAದ ಭಾನುವಾರ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ನಿವೃತ್ತ ದೈಹಿಕ ಶಿಕ್ಷಕ ಮೌಲಾಸಾಬ್ ಚಾಲನೆ ನೀಡಿದರು. ಹಳೆವಿದ್ಯಾರ್ಥಿಗಳಾದ ಗುಂಡರಾಜ್, ತಾಯಪ್ಪ ಕರಡಿ, ಉಮಾಪತಿ, ಮೊಹಮ್ಮದ್ ಜಬಿಬುಲ್ಲ, ರವಿಕುಮಾರ್, ಯಲ್ಲಪ್ಪ, ಶಿವಕುಮಾರ್, ಕೃಷ್ಣ, ನಿಂಗಪ್ಪ, ಎ.ವೆಂಕಟೇಶ, ಗೌಳಿವಿರೇಶ, ಪೂಜಾರಿ ಗುರುರಾಘವೇಂದ್ರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ದಿನಾಚರಣೆಯಲ್ಲಿ ನಿವೃತ್ತ ದೈಹಿಕ ಶಿಕ್ಷಕ ಮೌಲಾಸಾಬ್ ಕರೆ
ಹೊಸಪೇಟೆ: ಪರಿಸರವು ಪ್ರತಿ ಜೀವರಾಶಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಪರಿಸರದಲ್ಲಿಯ ಗಾಳಿ, ನೀರು, ಮಣ್ಣು, ಮರಗಳು ಎಂದೆAದಿಗೂ ಉಳಿಯಬೇಕು. ಅವು ಉಳಿದರೆ ನಮ್ಮ ಉಳಿವು ಸಾಧ್ಯ ಎಂದು ನಿವೃತ್ತ ದೈಹಿಕ ಶಿಕ್ಷಕ ಮೌಲಾಸಾಬ್ ಹೇಳಿದರು.
ಪರಿಸರ ದಿನಾಚರಣೆ ನಿಮಿತ್ತ ತಾಲೂಕಿನ ಕಮಲಾಪುರದ ಪ್ರೌಢಾಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದಿAದ ಭಾನುವಾರ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾವೆಲ್ಲರೂ ಪರಿಸರವನ್ನು ಅವಲಂಬಿಸಿದ್ದೇವೆ. ಪರಿಸರ ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು. ಪರಿಸರದ ಮಹತ್ವ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು. ಇದು ನಿರಂತರ ಕ್ರಿಯೆಯಾಗಬೇಕು. ಪರಿಸರ ದಿನಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.
ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷಣೆ ಈಗಿರುವ ಮಾರ್ಗವಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ-ಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರದ ಕೊಡುಗೆ ನೀಡಬೇಕು. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು, ಪೋಷಿಸಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net