ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ದೇವರ ದಾಸಿಮಯ್ಯನವರ ಕುರಿತು ಮೂಲಭೂತ ಸಂಶೋಧನೆ ಅಗತ್ಯವಿದೆ. ಜೀವನದ ಮೇಲೆ ಪ್ರೀತಿ ಹೊಂದಿದವರೇ ವಚನಕಾರರು. ದೊಡ್ಡ ವಚನಕಾರರಿಗೆ ಅನೇಕ ಅರಸರ, ಅಧಿಕಾರಿಗಳ ಬೆಂಬಲವಿದ್ದು, ಅಂಥವರ ನಡುವೆ ದಾಸಿಮಯ್ಯನವರ ವಚನಗಳನ್ನು ಇಂದಿಗೂ ನಾವು ನೆನಪಿಸಿಕೊಳ್ಳುತ್ತಿರುವುದು, ಅವರ ವಚನಗಳಲ್ಲಿನ ಸತ್ವದ ಮಹತ್ವವನ್ನು ತೋರಿಸುತ್ತದೆ ಎಂದರು.