ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಲಿ

ಕಂಪ್ಲಿಯಲ್ಲಿ ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆರ್‌ಐ ಸುರೇಶ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಸಂತರಾಜ ಕಹಳೆ, ಸಣಾಪುರ ಮರಿಸ್ವಾಮಿ, ಎ.ಲಕ್ಷ್ಮೀಪತಿ, ಜಿ.ರಾಮಣ್ಣ, ಕೆ.ಲಕ್ಷ್ಮಣ ಇತರರಿದ್ದರು.
ಕಂಪ್ಲಿಯಲ್ಲಿ ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆರ್‌ಐ ಸುರೇಶ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಸಂತರಾಜ ಕಹಳೆ, ಸಣಾಪುರ ಮರಿಸ್ವಾಮಿ, ಎ.ಲಕ್ಷ್ಮೀಪತಿ, ಜಿ.ರಾಮಣ್ಣ, ಕೆ.ಲಕ್ಷ್ಮಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಐ ಎಸ್.ಸುರೇಶ್‌ಗೆ ಮನವಿ

ಕಂಪ್ಲಿ: ರಾಯಚೂರು ಜಿಲ್ಲೆಯ ವಕ್ರಾಣಿ ಗ್ರಾಮದ ದಲಿತ ಯುವತಿ ಅಶ್ವಿನಿ ಅತ್ಯಾಚಾರ, ಕೊಲೆ ಹಾಗೂ ಭೂಮಾನಂದನ ಕೊಲೆ ಪ್ರಕರಣ ಖಂಡಿಸಿ ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಆರ್‌ಐ ಎಸ್. ಸುರೇಶ್‌ಗೆ ಮನವಿ ಸಲ್ಲಿಸಿದರು.

ಭೂಮಾನಂದನ ಕೊಲೆ ಹಾಗೂ ಅಶ್ವಿನಿ ಅತ್ಯಾಚಾರ, ಕೊಲೆ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ, ಉದ್ಯೋಗ, ಪರಿಹಾರ ನೀಡಬೇಕು. ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ತುರ್ತು ವಿಚಾರಣೆ ಜತೆಗೆ ಇಂತಹ ಘಟನೆ ನಡೆಯದಂತೆ ಸರ್ಕಾರ ಕ್ರೃಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ವಸಂತರಾಜ ಕಹಳೆ, ಸಣಾಪುರ ಮರಿಸ್ವಾಮಿ, ಎ.ಲಕ್ಷ್ಮೀಪತಿ, ಜಿ.ರಾಮಣ್ಣ, ಕೆ.ಲಕ್ಷ್ಮಣ, ಎಚ್.ಹುಲುಗಪ್ಪ, ಮೆಟ್ರಿ ಬಸವರಾಜ, ಸಿ.ಬಸವರಾಜ, ಎಸ್.ಬಸವರಾಜ, ಎಂ.ಅಂಕ್ಲೇಶ್, ಯಲ್ಲಪ್ಪ, ತಿಪ್ಪೇಸ್ವಾಮಿ ಸಣಾಪುರ, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net