ಸಮಾಜದ ಆರೋಗ್ಯವೇ ವೈದ್ಯರ ಧ್ಯೇಯವಾಗಲಿ

ಉನ್ನತ ಮಟ್ಟದ ವ್ಯಾಸಂಗಕ್ಕೆ ತೆರಳುತ್ತಿರುವ ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ಸುನಿಲ್ ಕುಮಾರ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಡಾ. ವಿದ್ಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ, ಬಳ್ಳಾರೆಪ್ಪ, ಹನುಮಂತಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯ ಡಾ.ಸುನಿಲ್ ಕುಮಾರ್ ಹೇಳಿಕೆ
  • ಬೀಳ್ಕೊಡುಗೆ
ಸಿರಿಗೇರಿ: ವೃತ್ತಿ ಮತ್ತು ಜನಪರ ಯೋಜನೆಗಳನ್ನು ಬಳಸಿಕೊಂಡು ವೈದ್ಯರು ಸಮಾಜವನ್ನು ಆರೋಗ್ಯದಿಂದ ಇರಿಸಬೇಕು ಎಂದು ವೈದ್ಯ ಡಾ.ಸುನಿಲ್ ಕುಮಾರ್ ಹೇಳಿದರು.
ಉನ್ನತ ಮಟ್ಟದ ವ್ಯಾಸಂಗಕ್ಕೆ ತೆರಳುತ್ತಿರುವ ಇವರಿಗೆ ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಕಾಸಿಂ ಮಾತನಾಡಿ, ಡಾ. ಸುನಿಲ್ ಕುಮಾರ್ ಅವರು 2022ರಲ್ಲಿ ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಊರಿನವರಿಂದ ಗೌರವ ಪ್ರೀತಿ ಸಿಕ್ಕಿದೆ ಎಂದರು.
ಗ್ರಾಮದ ಮುಖಂಡರಾದ ಯಂಕಪ್ಪ, ಭೀಮರೆಡ್ಡಿ, ಬಾಲಾಜಿ, ಜಯಣ್ಣ ಇತರರಿದ್ದರು. ಪುರುಷೋತ್ತಮರೆಡ್ಡಿ, ನೆನೆಕ್ಯಪ್ಪ, ತುರುಮುಂದೆಪ್ಪ, ಈರಣ್ಣ, ಮುಕ್ಕಣ್ಣ ಮೃತ್ಯುಂಜಯ, ನಾಸ್ರಿನ್, ವಾಹಿದಾ, ರೇಣುಕಾ, ಪದ್ಮಜ, ಶೋಭಾ, ರುದ್ರಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net