

ಪ್ರಮುಖ ಮುಖ್ಯಾಂಶಗಳು
ಮರಿಯಮ್ಮನಹಳ್ಳಿ: ಬಂಜಾರ ಸಮುದಾಯದವರು ಗುಳೆಹೋಗುವುದು ತಪ್ಪಿಸಲು ಶಾಶ್ವತಪರಿಹಾರಗಳನ್ನು ಜಾರಿಗೊಳಿಸಲು ಚಿಂತನೆ ಮಾಡಬೇಕೆಂದು ಮಾಜಿ ಶಾಸಕ ಭೀಮನಾಯ್ಕ ಹೇಳಿದರು.
ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಕಮತಗಿಬಳಿ ಟ್ರಾಕ್ಟರ್ ಪಲ್ಟಿಯಾಗಿ ಮೃತರಾದ, ಸಮೀಪದ ತಾಳೆಬಸಾಪುರ ತಾಂಡದ ಪಾರ್ವತಿಬಾಯಿ,ರೋಷನ್ ನಾಯ್ಕ ಕುಟುಂಬದವರಿಗೆ ಸಾಂತ್ವಾನಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಗುಳೆ ಹೋಗುವವರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಸಿಗುವಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸುವೆ.ಬಂಜಾರ ಸಮಾಜದ ಕಸೂತಿಕಲೆಗೆ ಬೇಡಿಕೆ ಇದೆ. ಈ ಕಸೂತಿಕಲೆಯ ಕೇಂದ್ರಗಳನ್ನು ತಾಲೂಕಿಗೊಂದರಂತೆ ತೆರೆದು ಅವರಿಗೆ ಮಹಿಳೆಯರಿಗೆ ಸೂಜಿಕಸೂತಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಬೇಕು ಎಂದರು.
ಅಲ್ಲದೇ ಗುಳೆ ತಡೆಗಟ್ಟಲು ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಗುಳೆಹೋಗುವವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು, ಅವರ ಶಿಕ್ಷಣಕ್ಕಾಗಿ ಪ್ರತ್ಯೇಕ ವಸತಿಶಾಲೆಗಳನ್ನು ಸಹ ತೆರೆಬೇಕು. ಗುಳೆಹೋಗುವವರ ಸರ್ಕಾರ ಜೀವವಿಮೆಯನ್ನು ಕಲ್ಪಿಸಿ ಕೊಡಬೇಕು. ಕಾರ್ಮಿಕ ಇಲಾಖೆಯಡಿಯಲ್ಲಿ ಇವರನ್ನು ಪರಿಗಣಿಸಲು, ಕಾರ್ಮಿಕಸಚಿವ ಸಂತೋಷಲಾಡ್ ರವರನ್ನು ಒತ್ತಾಯಿಸುವೆ. ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಮುಂದಾಗುವೆ. ಮುಂದಿನ ದಿನಗಳಲ್ಲಿ ಜಿಲ್ಲಾಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ರನ್ನು ತಾಳೆಬಸಾಪುರತಾಂಡಕ್ಕೆ ಕರೆತರುವೆ ಎಂದರು.
ಮೃತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಭೀಮನಾಯ್ಕ ತಮ್ಮ ವೈಯಕ್ತಿಕ ಸಹಾಯಧನ 2.40 ಲಕ್ಷ ರೂ.ಗಳನ್ನು ನೀಡಿದರು.