ಫಲಾನುಭವಿಗಳು ಕಾಯ್ದೆಯಿಂದ ವಂಚಿತರಾಗದಿರಲಿ

ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಕಾಯ್ದೆ ಮತ್ತು ನಿಯಮಗಳ ಕಾರ್ಯಾಗಾರವನ್ನು ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಚಾಲನೆ ನೀಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ರವಿಕುಮಾರ್, ಬಳ್ಳಾರಿ ಕಲ್ಯಾಣಾಧಿಕಾರಿ ಶಾಶು, ಓಡಿಸ್ಸಾದ ಸಂಪನ್ಮೂಲಕ ವ್ಯಕ್ತಿಗಳಾದ ಗಿರಿ ರಾವ್, ಪ್ರಿಯಾಂಕಾ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ ಕಾರ್ಯಾಗಾರದಲ್ಲಿ ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಸೂಚನೆ
ಹೊಸಪೇಟೆ: ಬುಡಕಟ್ಟು ನಿವಾಸಿಗಳಿಗೆ ಹಾಗೂ ಸಾಂಪ್ರಾದಾಯಿಕ ಅರಣ್ಯ ನಿವಾಸಿಗಳಿಗೆ ಕಾನೂನು ಬದ್ದವಾಗಿ ಭೂಮಿ ಹಕ್ಕಿಲ್ಲದವರಿಗೆ ಭೂಮಿ ನೀಡುವ ಮೂಲಕ ನ್ಯಾಯ ಒದಗಿಸುವುದೇ ಕಾಯ್ದೆಯ ಉದ್ದೇಶವಾಗಿದೆ ಎಂದು ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಹೇಳಿದರು.
ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ 2006 ಮತ್ತು ನಿಯಮಗಳು 2008 ರ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆಯನ್ನು ಗ್ರಾಮೀಣ, ಉಪವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತಗಳಲ್ಲಿ ರಚಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸುವ ಮೂಲಕ ಅನುಮೋದನೆ ನೀಡಬೇಕು. ಕನಿಷ್ಠ 75 ವರ್ಷಗಳು ಅರಣ್ಯದಲ್ಲಿ ವಾಸವಾಗಿರುವ ಬಗೆ ದಾಖಲೆ ಸಾಬೀತುಪಡಿಸಬೇಕು. ಅದರಲ್ಲಿ ಪಿಡಿಒ ಪ್ರಮುಖ ಪಾತ್ರವಾಗಿದೆ. ಅಧಿಕಾರಿಗಳು ಅನುಮೋದನೆ ನೀಡುವ ವೇಳೆ ಯಾವುದೇ ಗೊಂದಲಗಳಿಗೊಳಗಾಗಿ ತಪ್ಪಾದ ಮಾಹಿತಿ ಒದಗಿಸಕೂಡದು. ಅರ್ಹ ಫಲಾನುಭವಿಗಳು ತಮ್ಮ ಹಕ್ಕುಗಳಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿಯೇ ಸೂಕ್ಷ್ಮವಾಗಿ ದಾಖಲೆಗಳ ಪರಿಶೀಲಿಸಿ ವರದಿ ನೀಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net