ಕ್ಯಾಪ್ ನಂತೆ ಕಾರ್ಯವೈಖರಿ ಬದಲಾಗಲಿ

ಹೊಸಪೇಟೆ ಡಿಎಆರ್ ಮೈದಾನದಲ್ಲಿ ಶುಕ್ರವಾರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ನೂತನ ಬ್ಲೂ ಪೀಕ್ ಕ್ಯಾಪ್ ಎಸ್ಪಿ ಎಸ್.ಜಾಹ್ನವಿ ವಿತರಿಸಿದರು.ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿಗಳಾದ ಡಾ.ಟಿ.ಮಂಜುನಾಥ, ಮಲ್ಲೇಶ್ ದೊಡ್ಡಮನಿ ಇತರರಿದ್ದರು.
ಹೊಸಪೇಟೆ ಡಿಎಆರ್ ಮೈದಾನದಲ್ಲಿ ಶುಕ್ರವಾರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ನೂತನ ಬ್ಲೂ ಪೀಕ್ ಕ್ಯಾಪ್ ಎಸ್ಪಿ ಎಸ್.ಜಾಹ್ನವಿ ವಿತರಿಸಿದರು.ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿಗಳಾದ ಡಾ.ಟಿ.ಮಂಜುನಾಥ, ಮಲ್ಲೇಶ್ ದೊಡ್ಡಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಲೂ ಪೀಕ್ ಕ್ಯಾಪ್ ವಿತರಣೆ ಕಾರ್ಯಕ್ರಮದಲ್ಲಿ ಎಸ್ಪಿ ಎಸ್.ಜಾಹ್ನವಿ ಸೂಚನೆ
ಹೊಸಪೇಟೆ : ಪೊಲೀಸ್ ಸಿಬ್ಬಂದಿಗಳ ಕ್ಯಾಪ್ ಬದಲಾದಂತೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿಯಲ್ಲಿ ಕೂಡ ಬದಲಾವಣೆ ಆಗಬೇಕಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ನೂತನ ಬ್ಲೂ ಪೀಕ್ ಕ್ಯಾಪ್ ವಿತರಿಸಿ ಮಾತನಾಡಿದರು.
ನೂತನ ಪೀಕ್ ಧರಿಸಿದ ಸಿಬ್ಬಂದಿಗಳಿಗೆ ಹೆಮ್ಮೆಯ ಫೀಲ್ ಆಗುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆ ಸೇರಿದಂತೆ ಸಂಚಾರ ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳ ತಡೆಗೆ ಇನ್ನು ಶ್ರಮವಹಿಸುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಎಂದರು.
ಬ್ಲೂ ಪೀಕ್ ಕ್ಯಾಪ್ ವಿತರಣಾ ಕಾರ್ಯಕ್ರಮದ ಆಂಗವಾಗಿ ಎಸ್ಪಿ ಅವರಿಂದ ವಂದನೆ ಸ್ವೀಕಾರ, ನೂತನ ಕ್ಯಾಪ್ ಧರಿಸಿದ ಪೊಲೀಸ್ ಸಿಬ್ಬಂದಿಗಳಿಂದ ಮೊದಲ ಪಥಸಂಚಲನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿಗಳಾದ ಡಾ.ಟಿ.ಮಂಜುನಾಥ, ಮಲ್ಲೇಶ್ ದೊಡ್ಡಮನಿ, ಆರ್ ಪಿ ಐ ಗೋವಿಂದ್, ಪಿಐಗಳಾದ ಡಿ.ಹುಲುಗಪ್ಪ, ಗುರುರಾಜ ಕಟ್ಟಿಮನಿ, ಸೋಮ್ಲಾ ನಾಯ್ಕ್, ಮಹಮದ್ ಗೌಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net