ಸಾಹಿತ್ಯವು ಸಮಾಜಕ್ಕೆ ದಾರಿದೀಪವಾಗಲಿ

ಕನ್ನಡ ವಿವಿಯಲ್ಲಿ ಆಯೋಜಿಸಿದ್ದ ಲಿಂಗದೃಷ್ಠಿಯ ಮೂಲಕ ಪಠ್ಯದ ಓದು ಎಂಬ ಕಮ್ಮಟದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿವಿಯ ಪ್ರಾಧ್ಯಾಪಕ ಪ್ರೊ.ವಿ.ಬಿ.ತಾರಕೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ವಿವಿಯ ಕುಲಪತಿ ಪರಮಶಿವಮೂರ್ತಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿವಿಯ ಪ್ರಾಧ್ಯಾಪಕಿ ಪ್ರೊ.ಎಸ್.ನಿಖಿಲಾ, ಪ್ರಾಧ್ಯಾಪಕರಾದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ, ಡಾ.ಶೈಲಜ ಇಂ.ಹಿರೇಮಠ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನ ಪ್ರಾಧ್ಯಾಪಕ ಪ್ರೊ.ವಿ.ಬಿ.ತಾರಕೇಶ್ವರ್ ಕರೆ
ಹೊಸಪೇಟೆ: ಲಿಂಗ ಅಧ್ಯಯನ ಕುರಿತು ಮಾತನಾಡುವಾಗ, ಮಹಿಳೆಯರ ಮತ್ತು ಪುರುಷರ ನಡುವಿನ ಸಾಮಾಜಿಕ ಸಂಬAಧವನ್ನು ರೂಪಿಸುವಲ್ಲಿ ಆರ್ಥಿಕ ರಾಜಕೀಯ, ಧಾರ್ಮಿಕ ಅಂಶಗಳು ಯಾವ ರೀತಿಯಾಗಿ ಪ್ರಭಾವಿಸುತ್ತವೆ ಎಂಬುದನ್ನು ನೋಡಬೇಕು ಎಂದು ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿವಿಯ ಪ್ರಾಧ್ಯಾಪಕ ಪ್ರೊ.ವಿ.ಬಿ.ತಾರಕೇಶ್ವರ್ ಹೇಳಿದರು.
ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗದಿಂದ ಇತ್ತೀಚಿಗೆ ಆಯೋಜಿಸಿದ್ದ ಲಿಂಗದೃಷ್ಠಿಯ ಮೂಲಕ ಪಠ್ಯದ ಓದು ಎಂಬ ಕಮ್ಮಟದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ಕನಿಕರದಿಂದ ಹಾಗೂ ಪುರುಷರನ್ನು ಪುರುಷ ಪ್ರಧಾನ ಸಮಾಜದ ನಿಯಂತ್ರಕರಾಗಿ ನೋಡುತ್ತೇವೆ. ಇಬ್ಬರನ್ನು ಜೈವಿಕ ರಚನೆಯ ಆಧಾರದಲ್ಲಿ ಹಾಗೂ ದೈವಿಕ ಸಿದ್ಧಾಂತದ ನೆಲೆಯಲ್ಲಿ ನೋಡಿದಾಗ ಪುರುಷ ಮತ್ತು ಸ್ತಿçà ಇಬ್ಬರೂ ಸಾಮಾಜಿಕವಾಗಿ ನಿರೂಪಣೆಗೊಂಡಿರುವವರು. ದೈಹಿಕ ಭಿನ್ನತೆಯ ಮೇಲೆ ಒಂದು ಸಾಮಾಜಿಕ ಅಸಮಾನತೆಯನ್ನು ನಿರೂಪಿಸಲ್ಪಟ್ಟಿದೆ. ಆದ್ದರಿಂದ ಈ ಜೈವಿಕ ಅಸಮಾನತೆಯ ಮೇಲೆ ಸಾಮಾಜಿಕ ಅಸಮಾನತೆಯನ್ನು ಸೃಷ್ಠಿ ಮಾಡಿರುವುದರಿಂದ ಪುರುಷರು ಯಾವ ರೀತಿ ಸೃಷ್ಠಿಯಾಗಿದ್ದಾರೆ, ರೂಪಿಸಿದ ಅಂಶಗಳು ಯಾವುವು, ಜೆಂಡರ್ ವ್ಯವಸ್ಥೆಯಲ್ಲಿ ಪುರುಷರ ಪಾತ್ರವೇನು, ಸಾಮಾಜಿಕ ನಿರೂಪಣೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಪಠ್ಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಸಾಹಿತ್ಯವು ಸಮಾಜಕ್ಕೆ ದಾರಿದೀಪವಾಗಬೇಕು. ಸಮಾಜದಲ್ಲಿರುವುದನ್ನೇ ಪಠ್ಯದಲ್ಲಿ ತೋರಿಸಬಾರದು ಎನ್ನುವುದಲ್ಲ, ಆ ಸಮಾಜ ಯಾವ ರೀತಿಯಲ್ಲಿ ಸಾಗಬೇಕು ಎನ್ನುವುದನ್ನು ತೋರಿಸಬೇಕು ಎನ್ನುವ ಒಂದು ಸಾಮಾಜಿಕ ವಾಸ್ತವದ ಹಿನ್ನೆಲೆಯಲ್ಲಿ ಸಾಹಿತ್ಯ ರಚನೆಯಾಗಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net