ಸಿರಿಗೇರಿಯಲ್ಲಿ ಧಾತ್ರಿ ರಂಗ ಸಂಸ್ಥೆಯಿಂದ ಆಯೋಜಿಸಿದ್ದ ಕಳರಿ ಪಯಟ್ಟು ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಲಾ ನಿರ್ದೇಶಕ ವಿನೋದ್ ಕಡಂಗಲ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹೂಗಾರ್ ಬಸವರಾಜ, ವಿಶ್ವಗುರು ಬಯಲಾಟ ಕಲಾ ಟ್ರಸ್ಟ್ ಕಾರ್ಯದರ್ಶಿ ವೈ.ಜಡೇಶ, ಧಾತ್ರಿ ರಂಗಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ, ಶಿಬಿರಾರ್ಥಿಗಳು ಇದ್ದರು.
ಸಿರಿಗೇರಿ: ಗ್ರಾಮದ ಧಾತ್ರಿ ರಂಗ ಸಂಸ್ಥೆಯಿಂದ ಅಭಿನಯ ಮತ್ತು ಕಳರಿ ಪಯಟ್ಟು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಕಳರಿ ಪಯಟ್ಟು ಕಲಾ ಪ್ರದರ್ಶನ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನ ಆವರಣದ ಬಯಲು ರಂಗಸ್ಥಳದಲ್ಲಿ ನಡೆಯಿತು.
ಕೇರಳದ ಕಳರಿ ಪಯಟ್ಟು ಕಲಾ ನಿರ್ದೇಶಕ ವಿನೋದ್ ಕಡಂಗಲ್ ಮಾತನಾಡಿ, ಬಳ್ಳಾರಿಯಂತಹ ಭಾಗಕ್ಕೆ ಕಳರಿ ಪಯಟ್ಟು ಸಮರ ಕಲೆ ತುಂಬಾ ವಿಶೇಷವಾದದು,್ದ ಈ ಸಮರ ಕಲೆಯನ್ನು ಅಚ್ಚುಕಟ್ಟಾಗಿ ಅಭ್ಯಾಸ ಮಾಡಿ ತರಬೇತಿ ಪಡೆದವರು ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಿಬಿರಾರ್ಥಿಗಳಾದ ಜಿ.ಎಂ.ವಿಜಯ್‌ಕುಮಾರ್, ಮಣಿಕಂಠ ಎನ್.ಜಿ.ಎಂ ಸೌಮ್ಯಾ, ವೈ.ಪೂರ್ಣಿಮಾ, ಸುಮಿತ್ರಾ, ಸುಮಂಗಳಾ, ಸ್ವಾಮಿ, ಗಣೇಶ ಎಂ, ದರ್ಶನ್, ನಾಗರಾಜ ಬಡಿಗೇರ್, ಪ್ರದೀಪ್, ಕಿರಣಕುಮಾರ್ ಕಳರಿ ಪಯಟ್ಟು ತರಬೇತಿ ಪಡೆದು ಪ್ರದರ್ಶನ ನೀಡಿದರು.
ರಂಗ ನಿರ್ದೇಶಕಿಯರಾದ ಶ್ರುತಿ ವಿ.ತಿಪಟೂರು, ಸಲ್ಮಾ ದಂಡಿನ್ ಧಾರವಾಡ, ಶಂಭುಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹೂಗಾರ್ ಬಸವರಾಜ, ಉಪಾಧ್ಯಕ್ಷ ಬಸವರಾಜ ಕುಂಬಾರ್, ಸದಸ್ಯ ಹೂಗಾರ್ ಮಲ್ಲಿಕಾರ್ಜುನ, ವಿಶ್ವಗುರು ಬಯಲಾಟ ಕಲಾ ಟ್ರಸ್ಟ್ ಕಾರ್ಯದರ್ಶಿ ವೈ.ಜಡೇಶ, ಧಾತ್ರಿ ರಂಗಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ ಇದ್ದರು.