ಗುಡೇಕೋಟೆ ಪ್ರವಾಸಿ ತಾಣವಾಗಲಿ

ಗುಡೇಕೋಟೆ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ಕರವೇ ಹೋಬಳಿ ಘಟಕದಿಂದ ಮನವಿ ಸಲ್ಲಿಸಲಾಯಿತು.
ಗುಡೇಕೋಟೆ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ಕರವೇ ಹೋಬಳಿ ಘಟಕದಿಂದ ಮನವಿ ಸಲ್ಲಿಸಲಾಯಿತು.
Published on
ಕೂಡ್ಲಿಗಿ: ಐತಿಹಾಸಿಕ ಗುಡೇಕೋಟೆ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಕರವೇ ಹೋಬಳಿ ಘಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ಶಿರಸ್ತೇದಾರ್ ಎಸ್.ಚಂದ್ರಶೇಖರಗೆ ಸೋಮವಾರ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್ ಮಾತನಾಡಿ, ಸಂಶೋಧಕರ ಪ್ರಕಾರ ಗುಡೇಕೋಟೆ ಗ್ರಾಮ ವೀರವನಿತೆ ಒನಕೆ ಓಬವ್ವ ತವರೂರು ಹಾಗೂ 15, 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ನಂತರ ಅನೇಕ ಪಾಳೇಗಾರರು ಆಳಿದ ನೆಲೆಬೀಡಾಗಿದೆ. ಏಷ್ಯಾ ಖಂಡದಲ್ಲೇ ಎರಡನೇ ಅತಿದೊಡ್ಡ ಕರಡಿಧಾಮವನ್ನು ಹೊಂದಿರುವ ಅಭಯಾರಣ್ಯವಾಗಿದೆ. ಈ ಅರಣ್ಯದಲ್ಲಿ ಕರಡಿ, ಚಿರತೆ, ನರಿ, ಚಿಪ್ಪು ಹಂದಿ, ನವಿಲು ಮತ್ತು ನಾನಾ ವನ್ಯಜೀವಿಗಳ ತಾಣವಾಗಿದೆ ಎಂದು ತಿಳಿಸಿದರು.
ಏಕಶಿಲೆಯಲ್ಲಿ ಕೆತ್ತಲಾದ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಮೂರ್ತಿ ಇದೆ. ಕೋಟೆ-ಕೊತ್ತಲಗಳು, ಗುಹೆಗಳು, ಶಿಲ್ಪಕಲೆಗಳ ವರ್ಣಚಿತ್ರಗಳನ್ನು ನೋಡಬಹುದಾಗಿದೆ. ಆದಿ ಮಾನವರ ಕುರುಹುಗಳು ಸಹ ದೊರಕಿವೆ. ಜನಪ್ರತಿನಿಧಿಗಳು, ಪ್ರಾಚ್ಯವಸ್ತು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇನ್ನೂ ಹೆಚ್ಚಿನ ಉತ್ಖನನ ನಡೆಸುವುದರೊಂದಿಗೆ ನಶಿಸಿ ಹೋಗುತ್ತಿರುವ ಸ್ಮಾರಕಗಳನ್ನು ರಕ್ಷಣೆ ಮಾಡಿ ಅಭಿವೃದ್ಧಿಪಡಿಸಬೇಕು. ಈ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಗ್ರಾಮ ಘಟಕದ ಅಧ್ಯಕ್ಷ ಜೆ.ಶಿವಕುಮಾರ್, ಗೌರವಾಧ್ಯಕ್ಷ ಪೇಂಟ್ ತಿಪ್ಪೇಸ್ವಾಮಿ, ರಮೇಶ ಜೋಡುಗಪ್ಲೆ, ಮಡಿವಾಳ ನಾಗರಾಜ್, ಕೆ.ದೇವೇಂದ್ರಪ್ಪ, ಕರಿಬಸವ, ರಾಮನಾಯ್ಕ ಡಿ., ದಡ್ಡಯ್ಯ, ಕಂಬಾರ ರಾಜಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net