ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಹೆಚ್ಚಾಗಿ ಸಂಚರಿಸುತ್ತಿದ್ದ ರತ್ನಕೂಟದ ಸಮೀಪದಲ್ಲೇ ಕಾರ್ಯತಂತ್ರ ರೂಪಿಸಿ ಬೋನು ಅಳವಡಿಸಿದ್ದರು. ನಿರಂತರ ಕಾವಲು ಮತ್ತು ಸೂಕ್ತ ಉಪಾಯದಿಂದಾಗಿ ಚಿರತೆ ಯಶಸ್ವಿಯಾಗಿ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತವಾಗಿ ಪರಿಶೀಲಿಸಿದ ಅರಣ್ಯ ಸಿಬ್ಬಂದಿ, ನಂತರ ಅದನ್ನು ಜನವಸತಿಯಿಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.