

ಹೊಸಪೇಟೆ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಂದಾಜು ಮೂರು ವರ್ಷದ ಗಂಡು ಚಿರತೆ ತಾಲೂಕಿನ ಚಿಲಕನಟ್ಟಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ನಡೆದಿದೆ.
ತಿಮ್ಲಾಪುರದಿಂದ ಕೂಡ್ಲಿಗಿಯತ್ತ ಸಾಗುವ ಹೆದ್ದಾರಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಆರ್ಎಫ್ಒ ಕೌಶಿಕ್ ದಳವಾಯಿ ತಿಳಿಸಿದರು.