ಹಗರಿಬೊಮ್ಮನಹಳ್ಳಿ:ಪುಸ್ತಕಗಳ ವಿದ್ಯಾರ್ಥಿಗಳ ಜೀವನ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬ್ಯಾಟಿ ನಾಗರಾಜ ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಪುಸ್ತಕಗಳ ವಿತರಣೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಮಾತನಾಡಿದರು. ಮೊಬೈಲ್‌ಗಳನ್ನು ಬಿಟ್ಟು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ಈ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಚಾರ್ಯ ಡಾ.ಎಂ.ಕೆ.ದುರುಗಪ್ಪ ಮಾತನಾಡಿ, ಸರ್ಕಾರ ಈಗ ನೀಡುತ್ತಿರುವ ಸೌಲಭ್ಯಗಳು ನಾವು ಶಿಕ್ಷಣ ಪಡೆಯುವಾಗ ಇರಲಿಲ್ಲ. ನಾವೆಲ್ಲ ಕಷ್ಟದ ದಿನಗಳಲ್ಲಿ ಶಿಕ್ಷಣ ಪಡೆದು ಒಂದು ಸ್ಥಾನ ಅಲಂಕರಿಸಿದ್ದೇವೆ. ಪುಸ್ತಕಗಳು ಭವಿಷ್ಯದ ಮುನ್ನುಡಿಯಾಗಿವೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಶೆಟ್ರು, ಬಡಿಗೇರ್ ಬಸವರಾಜ, ಉಪನ್ಯಾಸಕರಾದ ಬ್ಯಾಟಿ ಮಾರುತಿ, ಗೂಳೆಪ್ಪ ಹುಲಿಮನಿ, ಹುಲೇಪ್ಪ ಮತ್ತಿತರರು ಇದ್ದರು.
29ಎಚ್.ಬಿ.ಎಚ್.1:
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬ್ಯಾಟಿ ನಾಗರಾಜ, ಸದಸ್ಯರಾದ ಕೃಷ್ಣಮೂರ್ತಿ ಶೆಟ್ರು, ಬಡಿಗೇರ್ ಬಸವರಾಜ, ಪ್ರಾಚಾರ್ಯ ಡಾ.ಎಂ.ಕೆ.ದುರುಗಪ್ಪ ಮತ್ತಿತರರು ಇದ್ದರು.