ನಮ್ಮೂರ ಶಾಲೆ ಉಳಿಸಿ ಆಂದೋಲನಕ್ಕೆ ಚಾಲನೆ

ಹೊಸಪೇಟೆ ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಮ್ಮೂರ ಶಾಲೆ ಉಳಿಸಿ ಆಂದೋಲನ ನಡೆಯಿತು. ಎಐಡಿಎಸಓ ಜಿಲ್ಲಾ ಅಧ್ಯಕ್ಷ ಜೆ.ಪಿ.ರವಿಕಿರಣ್, ಕಾರ್ಯದರ್ಶಿ ಉಮಾದೇವಿ ತರರಿದ್ದರು.
ಹೊಸಪೇಟೆ ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಮ್ಮೂರ ಶಾಲೆ ಉಳಿಸಿ ಆಂದೋಲನ ನಡೆಯಿತು. ಎಐಡಿಎಸಓ ಜಿಲ್ಲಾ ಅಧ್ಯಕ್ಷ ಜೆ.ಪಿ.ರವಿಕಿರಣ್, ಕಾರ್ಯದರ್ಶಿ ಉಮಾದೇವಿ ತರರಿದ್ದರು.
Published on

ಹೊಸಪೇಟೆ: ಎಐಡಿಎಸಓ ಸಂಘಟನೆಯಿA ಇಲ್ಲಿನ ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ನಮ್ಮೂರ ಶಾಲೆ ಉಳಿಸಿ ಆಂದೋಲನ ನಡೆಯಿತು.

ಎಐಡಿಎಸಓ ಜಿಲ್ಲಾ ಅಧ್ಯಕ್ಷ ಜೆ.ಪಿ.ರವಿಕಿರಣ್ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ದ ಕಳೆದ 4 ತಿಂಗಳಿನಿA ಜನ ಹೋರಾಟ ನಡೆದಿದೆ. ರಾಜ್ಯದಾದ್ಯಂತ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ. ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಬಡಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ ಎಂದು ಆಗ್ರಹಿಸಿದರು.

ವಿರೋಧದ ನಡುವೆಯೂ ಸರ್ಕಾರ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮುಂದುವರಿಸಿದೆ. ಸರ್ಕಾರವು ಈಗಾಗಲೇ ಯಾವ-ಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ. ವೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. .09 ಮತ್ತು 10 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸುವಂತೆ ಶಾಲೆಗಳಿಗೆ ನೋಟಿಸ್ ನೀಡಲಾಗುವುದು.ಈಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲುಡಿಡಿಪಿಐಹಾಗೂ ಬಿಇಓಗಳ ಸಭೆಯನ್ನು ನಡೆಸಿ ಶಾಲೆ ಮುಚ್ಚಲು ಕುತಂತ್ರ ನಡೆಸಿದೆ. ಮುಂಬರು ದಿನಗಳಲ್ಲಿ ನಡೆಯುವ ಹೋರಾಟಗಳಲ್ಲಿ ಎಲ್ಲಾರೂ ಕೈಜೋಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net