ಹೂವಿನಹಡಗಲಿಯಲ್ಲಿ ಬಾಲಕಿಗೆ ಸಿಡಿಪಿಒ ರಾಮನಗೌಡ ಲಸಿಕೆ ಹಾಕಿದರು.
Published on:
Copied
Follow Us
ಹೂವಿನಹಡಗಲಿ: ತಾಲೂಕಿನಲ್ಲಿ ಐದು ವರ್ಷದೊಳಗಿನ 19,493 ಮಕ್ಕಳಿದ್ದು, ಎಲ್ಲರಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಲು 199 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಟಿಎಚ್‌ಒ ಡಾ.ಅಶೋಕ್ ಹೇಳಿದರು.
ಪಟ್ಟಣದ ತೇರುಹನುಮಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪಾಲಕರು ಯಾವುದೇ ಕಾರಣಕ್ಕೂ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಲ್ಲಿ ಪೋಲಿಯೋ ಲಸಿಕೆ ಕುರಿತು ಮಾಹಿತಿ ಕೊರತೆ ಇದೆ ಎಂದು ತಿಳಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ.ರಾಧಿಕಾ, ಡಾ.ಅಫ್ಜಲ್, ಸಿಡಿಪಿಒ ರಾಮನಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಜಿ.ವಿ.ಶಿವಕುಮಾರ್, ಔಷಧ ಅಧಿಕಾರ ವೈ.ಶಿವಕುಮಾರ್, ಡಾ.ರಮ್ಯಾ, ಡಾ.ಅಕ್ಕಮ್ಮ, ಡಾ.ಕವಿತಾ, ಡಾ.ಅನಿತಾ ಇತರರಿದ್ದರು.