ಕುರುವತ್ತಿ ಮಲ್ಲಿಕಾರ್ಜುನ-ಬಸವೇಶ್ವರಸ್ವಾಮಿ ರಥೋತ್ಸವ ಅದ್ದೂರಿ

ಕುರುವತ್ತಿಯಲ್ಲಿ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.
ಕುರುವತ್ತಿಯಲ್ಲಿ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.
Published on
ಹಡಗಲಿ: ಸುಕ್ಷೇತ್ರ ಕುರುವತ್ತಿ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ಹರಕೆ ತೀರಿಸಿದರು. ಸಂಜೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸಕಲ ಮಂಗಳವಾದ್ಯಗಳೊಂದಿಗೆ ರಥ ಬೀದಿ ಮೂಲಕ ಮೆರವಣಿಗೆ ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಾಘ ನಕ್ಷತ್ರದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವ ಜರುಗಿತು.
ಜಾತ್ರೆಗೆ ಬಂಡಿಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಎತ್ತುಗಳಿಗೆ ಗೆಜ್ಜೆ ಸರ, ಬಣ್ಣದ ಬಲೂನ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು, ಇದಕ್ಕೂ ಮೊದಲು ದೇವಸ್ಥಾನದಿಂದ ರಥಬೀದಿಯವರೆಗೂ ಎತ್ತಿನ ಮೆರವಣಿಗೆ ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ರಥ ಗ್ರಾಮದ ರಥಬೀದಿಯಲ್ಲಿನ ಪಾದಗಟ್ಟೆವರೆಗೆ ಸಾಗಿ ಮೂಲಸ್ಥಾನಕ್ಕೆ ಮರಳಿತು. ರಥ ಬೀದಿಯಲ್ಲಿ ಈ ಬಾರಿ ಸರ್ಕಾರಿ ವಾಹನಗಳು ಹೆಚ್ಚಾಗಿ ನಿಂತಿದ್ದರಿಂದ ರಥ ಸರಾಗವಾಗಿ ಸಾಗಲು ಸಮಸ್ಯೆಯಾಯಿತು. ಪೊಲೀಸ್ ಇಲಾಖೆಯ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net