ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಕುಂಭೋತ್ಸವ ಜರುಗಿತು.
Published on:
Copied
Follow Us
ಹೂವಿನಹಡಗಲಿ: ಹೊಳಗುಂದಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಕುಂಭೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
ಕುಂಭೋತಸ್ವ ಹಿನ್ನೆಲೆಯಲ್ಲಿ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಬಾವಿಹಳ್ಳಿ ಗ್ರಾಮದ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಿಂದ 111 ಕಳಸ ಹಾಗೂ 151 ಪೂರ್ಣ ಕುಂಭ ಮೆರವಣಿಗೆ ಮೂಲಕ ನೀರು ತಂದು ಜಲಾಭಿಷೇಕ ನೆರವೇರಿಸಲಾಯಿತು.
ಕಳಸದಾರಿ, ನಂದಿಕೋಲು, ಸಮಾಳ ಸೇರಿದಂತೆ ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ತಂದವು. ಅಳವಂಡಿ ಕಟ್ಟಿಮನಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುರೋಹಿತರಾದ ಎಚ್.ಎಂ.ಮಲ್ಲಿಕಾರ್ಜುನಯ್ಯ, ಯು.ಎಂ.ಮಹಾಸ್ವಾಮಿ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಸಿದ್ದೇಶ್ವರ ಸ್ವಾಮಿ ಕಮಿಟಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.