ಕಳೆದ ಎರಡು ವರ್ಷಗಳಲ್ಲಿ ಈ ಜೋಡಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಸದ್ಯದಲ್ಲೇ ಮತ್ತೊಂದು ಮರಿಯ ಆಗಮನದ ನಿರೀಕ್ಷೆಯಿದೆ. ತನ್ನ ವಿಶಿಷ್ಟ ಕೂಗಿನಿಂದಲೇ ಗಮನ ಸೆಳೆಯುವ ಬಾರ್ಕಿಂಗ್ ಡೀರ್‌ಗಳ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ 6 ಇದ್ದ ಈ ಪ್ರಾಣಿಗಳ ಬಳಗಕ್ಕೆ, ಅಧಿಕಾರಿಗಳ ಮೈಕ್ರೋ ಕ್ರೈಮೇಟ್ ನಿರ್ವಹಣೆಯಿಂದಾಗಿ ಈ ವರ್ಷ ಮೂರು ಮರಿಗಳು ಹೊಸದಾಗಿ ಸೇರ್ಪಡೆಯಾಗಿವೆ. ಬನ್ನೇರುಘಟ್ಟದಿಂದ ಬಂದಿದ್ದ 32 ವರ್ಷದ ಸೀತಾ ಹೆಸರಿನ ಹೆಣ್ಣು ಹಿಪ್ಪೋ, ಗಂಡು ಮರಿಗೆ ಜನ್ಮ ನೀಡಿದ್ದು, ಅದಕ್ಕೆ 'ಲಡ್ಡು' ಎಂದು ನಾಮಕರಣ ಮಾಡಲಾಗಿದೆ. 8 ತಿಂಗಳಿನ ಈ ಮರಿ ಮತ್ತು ತಾಯಿ ಸೀತಾ ಆರೋಗ್ಯವಾಗಿವೆ.