ಗುಜರಾತ್ ಸೋಮನಾಥ ದೇಗುಲದಿಂದ ಆರಂಭವಾಗ ಯಾತ್ರೆ ಮೊದಲು ಚಾರ್ ಧಾಮ್ ಯಾತ್ರೆಯನ್ನು ಪೂರ್ಣಗೊಳಿಸಿದರು. ನಂತರ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಲು ಕಠಿಣ ಹವಾಮಾನ ಮತ್ತು ಅಪಾಯಕಾರಿ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಿದ್ದಾರೆ. ಉಜ್ಜನಿ ಮಹಕಾಲೇಶ್ವರ, ಕೇದರ್ ನಾದರ್ ನಾಥ, ನೇಪಾಲ್ ಪಶುಪತಿನಾಥ, ಮಧ್ಯಪ್ರದೇಶದ ಓಂಕಾರೇಶ್ವರ , ಕಾಶಿ ವಿಶ್ವನಾಥ, ಜಾರ್ಖಂಡ್ ವೈಜಿನಾಥ ಧಾಮ, ಜಗನ್ನಾಥ ಪೂರಿ, ಮಹಾರಾಷ್ಟ್ರದ ಮೂಲಕ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ದರ್ಶನ ಪಡೆದಿದ್ದಾರೆ. ತಿರುಪತಿ, ರಾಮೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದರೆ ಅಂದಾಜು 15 ಸಾವಿರ ಕಿಮೀ ಸೈಕಲ್ ಯಾತ್ರೆ ಮಾಡಿದಂತೆ ಆಗುತ್ತದೆ. ಈ ಮೊದಲು ಎರಡು ಬಾರಿ ಬೈಕ್ ಯಾತ್ರೆ ಕೂಡ ಇವರು ಮಾಡಿದರು.