ಸಾಗುವಳಿ ರೈತರಿಗೆ ನೋಟಿಸ್ ನೀಡುವುದು ಸಲ್ಲ

 ಸಾಗುವಳಿ ಜಮೀನಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಾಗುವಳಿ ಜಮೀನಿಗೆ ಪಟ್ಟಾ ನೀಡುವಂತೆ ಒತ್ತಾಯಿಸಿ ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on
ಹಗರಿಬೊಮ್ಮನಹಳ್ಳಿ: ದಶಮಾಪುರ ಗ್ರಾಪಂ ವ್ಯಾಪ್ತಿ ಹಾಗೂ ಕಟ್ಟೆಹೊಲ ತಾಂಡದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಕೊಡಬೇಕು. ಅರಣ್ಯ ಹಕ್ಕು ಸಮಿತಿ ಸಭೆಯನ್ನು ಮತ್ತೊಮ್ಮೆ ಕರೆಯಬೇಕೆಂದು ಆಗ್ರಹಿಸಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯುದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಸಿಐಟಿಯು ತಾಲೂಕು ಸಂಚಾಲಕ ಎಸ್.ಜಗನ್ನಾಥ ಮಾತನಾಡಿ, ತಾಲೂಕಿನಲ್ಲಿ ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ, ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಸಿರುವ ಯಾವುದೇ ಅರ್ಜಿ ತಿರಸ್ಕರಿಸಬಾರದು ಹಾಗೂ ನೋಟಿಸ್ ಕೊಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಮಟ್ಟದಲ್ಲಿ ನಡೆಸಿರುವ ಸಭೆಯಲ್ಲಿ ರೈತರಿಗೆ ಕಾನೂನಿನ ಮಾಹಿತಿ ಕೊಡದೆ, ದಾಖಲೆಗಳನ್ನು ಸ್ವೀಕರಿಸದೆ, ಸಾಕ್ಷೃ ಕೇಳದೆ ಮತ್ತು ಹೊಲದಲ್ಲಿ ಸಮೀಕ್ಷೆ ಮಾಡದೆ ಏಕಾಏಕಿ ಸಭೆ ಮಾಡಿದ್ದಾರೆ. 2018-19 ರಲ್ಲಿ ಕೇಳಿರುವ ಎಲ್ಲ ದಾಖಲೆಗಳನ್ನು ನೀಡಿದ್ದೇವೆ. ಸಿಗಲಾರದ ದಾಖಲೆಗಳನ್ನು ಕೇಳಬಾರದು. ನ್ಯಾಯಬದ್ಧ ಭೂ ಸುಧಾರಣೆ ಕಾಯ್ದೆಯಡಿ ನ್ಯಾಯ ಒದಗಿಸಬೇಕು. ಮತ್ತೊಮ್ಮೆ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಈ ವಿಷಯದ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮಕ್ಕಾಗಿ ತಾಲೂಕು ಆಡಳಿತಕ್ಕೆ ಸೂಚಿಸುತ್ತೇನೆ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಆನಂದ, ಗೋವಿಂದ ನಾಯ್ಕ, ಟೀಕ್ಯಾನಾಯ್ಕಾ, ಕೆ.ಮಂಜುನಾಥ ನಾಯ್ಕ, ಗೋಣಿಬಸಪ್ಪ, ಎಸ್.ದುರುಗಪ್ಪ, ಶಿವಪ್ಪ, ಕೆ.ಮಹೇಶ್ವರ ಮೈಲಪ್ಪ, ದುರುಗಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net