ಟಿಬಿಡ್ಯಾಂ ವಿಚಾರ ಸರ್ಕಾರ ಕಣ್ಣಾಮುಚ್ಚಾಲೆ?

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ
ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ಕ್ರಸ್ಟ್‌ ಗೇಟ್ ಅನುದಾನ ಬಿಡುಗಡೆ ಮಾಡದೇ ಮಂಡುತನ
  • ಡ್ಯಾಮ್ ಗೇಟ್‌ ತಜ್ಞ ಕನ್ಹಯ್ಯ ನಾಯ್ಡು ಅರೋಪ
ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಕೊಟ್ಟ 10 ಕೋಟಿ ರೂ. ವಾಪಾಸ್ ಪಡೆದಿದೆ ಎಂದು ಇತ್ತೀಚೆಗೆ ಜಲಾಶಯಕ್ಕೆ ಭೇಟಿ ನೀಡಿದ ಡ್ಯಾಮ್ ಗೇಟ್‌ ತಜ್ಞ ಕನ್ಹಯ್ಯ ನಾಯ್ಡು ಅರೋಪಿಸಿದ್ದಾರೆ.
ತುಂಗಭದ್ರಾ ಜಲಾಶಯದ ಎಲ್ಲ ಕ್ರೆಸ್ಟ್‌ ಗೇಟ್‌ಗಳನ್ನು ಬದಲಾಯಿಸುವ ಬೃಹತ್ ಕಾಮಗಾರಿ ಪ್ರಗತಿಯಲ್ಲಿದೆ. ಅಹಮದಾಬಾದ್ ಮೂಲದ ಕಂಪನಿ ಗೇಟ್‌ಗಳನ್ನು ಬದಲಾಯಿಸುವ ಹೊಣೆ ಹೊತ್ತಿದ್ದು, 53 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಮುಗಿದಿದ್ದು, ಒಂದು ಗೇಟ್ ಅಳವಡಿಕೆ ಕೂಡ ಸಂಪೂರ್ಣ ಯಶಸ್ವಿಯಾಗಿದೆ. ರಾಜ್ಯ 10 ಕೋಟಿ ರೂ. ಹಾಗೂ ಆಂದ್ರ ಸರ್ಕಾರ 35 ಕೋಟಿ ರೂ. ಬಿಡುಗಡೆ ಮೊದಲ ಹಂತದ ಅನುದಾನ ಬಿಡುಗಡೆ ಮಾಡಿದ್ದವು. ಆದರೆ, ರಾಜ್ಯ ಸರ್ಕಾರ 10 ಕೋಟಿ ರೂ. ವಾಪಾಸ್ ಪಡೆದ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಗೇಟ್ ಅಳವಡಿಕೆಯಲ್ಲಿ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳ ಮಾತೇನು?

ಆಂದ್ರ ಸರ್ಕಾರ 35 ಕೋಟಿ ರೂ. ಹಾಗೂ ರಾಜ್ಯದ 10 ಕೋಟಿ ರೂ. ಕರ್ನಾಟಕ ಖಜಾನೆಗೆ ಹಸ್ತಾಂತರಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 10 ಕೋಟಿ ರೂ. ಅನುದಾನ ಮುರಿದು ಆಂದ್ರ ಮಾತ್ರ ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ ಎಂದು ಟಿಬಿಬಿ ಅಧಿಕಾರಿಗಳ ಮಾತಾಗಿದೆ.

ನಾಲ್ಕು ಗೇಟ್ ಅಳಚಡಿಕೆ ಚೂರುಕು

ಜಲಾಶಯದಲ್ಲಿ ಹೊಸ ಕ್ರಸ್ಟ್ ಗೇಟ್ ಗಳ ಕಾರ್ಯ ಡಿ.20ರಿಂದ ಆರಂಭವಾಗಿದೆ. 15ದಿನಗಳ ನಂತರ 18ನೇ ಹೊಸ ಗೇಟ್ ಮಾತ್ರ ಪೂರ್ಣ ಆಗಿದೆ. 7 ಹಳೆ ಗೇಟ್ ತೆರವು ಕಾರ್ಯ ಪೂರ್ಣ ಆಗಿದೆ. ಇನ್ನು 4ನೇ, 11ನೇ, 20ನೇ, 28ನೇ ಹೊಸ ಕ್ರಸ್ಟ್‌ ಗೇಟ್ ಗಳ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
"

ತುಂಗಭದ್ರಾ ಜಲಾಶಯದ ವಿಚಾರ ಸಣ್ಣದಲ್ಲ. ಅನುದಾನ ವಾಪಾಸ್ ಪಡೆದ ಆದೇಶ ಪತ್ರ ಇದ್ರೆ ಕನ್ನಯ್ಯ ನಾಯ್ಡು ತೋರಿಸಲಿ. ಅಧಾರದ ಇಲ್ಲದೇ ಆರೋಪ ಮಾಡುವುದು ಸೂಕ್ತವಲ್ಲ.

"

ರಾಜ್ಯ ಸರ್ಕಾರದ ಅನುದಾನ ಬಿಟ್ಟು ಆಂದ್ರ ಸರ್ಕಾರದ ಅನುದಾನ ಬಿಡುಗಡೆ ಮಾಡಿದೆ. ಉಳಿದ ಅನುದಾನ ಆದಷ್ಟು ಬೇಗ ಪಾವತಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net