ಸದ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಅಳತೆಗಳಲ್ಲಿ ಅಂದರೆ ಕಾಲು ಎಕರೆಯ 75 ನಿವೇಶನ, ಅರ್ಧ ಎಕರೆಯ 47, ಒಂದು ಎಕರೆಯ 3, ಒಂದೂವರೆ ಎಕರೆಯ 45, 5 ಎಕರೆಯ 2, 10 ಎಕರೆಯ ಒಂದು ನಿವೇಶನ ಸೇರಿ ಒಟ್ಟು 173 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆರಂಭದಲ್ಲಿ ಕೇವಲ ಎರಡ್ಮೂರು ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಆದರೆ, ಶೇ.50 ದರ ಕಡಿತಗೊಳಿಸಿದ ನಂತರ 52 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಿಂದ ಇನ್ನೂ ಎರಡ್ಮೂರು ತಿಂಗಳಲ್ಲಿ ಭರ್ತಿಯಾಗುವ ನಿರೀಕ್ಷೆಯಲ್ಲಿ ಕೈಮಗ್ಗ ಹಾಗೂ ಜವಳಿ ಇಲಾಖೆ ಅಧಿಕಾರಿಗಳಿದ್ದಾರೆ.