ಹೂವಿನಹಡಗಲಿಯಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ನಿಮಿತ್ತ ಪೊಲೀಸ್ ಇಲಾಖೆಯಿಂದ ಮ್ಯಾರಥಾನ್ ನಡೆಯಿತು. ಸಿಪಿಐ ಮಲ್ಲಪ್ಪ ಹೂಗಾರ, ಪಿಎಸ್‌ಐಗಳಾದ ಮಣಿಕಂಠ, ಜೆ.ಕೆ.ಅಬ್ಬಾಸ್, ಅಶೋಕ ಬೇವೂರು ಇತರರಿದ್ದರು.
ಹೂವಿನಹಡಗಲಿ: ಭವಿಷ್ಯ ನಾಶ ಮಾಡುವ ಮಾದಕ ದ್ರವ್ಯದ ಬಗ್ಗೆ ಯುವ ಜನತೆ ಜಾಗೃತರಾಗಬೇಕು ಎಂದು ಸಿಪಿಐ ಮಲ್ಲಪ್ಪ ಹೂಗಾರ ಹೇಳಿದರು.
ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ನಿಮಿತ್ತ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮ್ಯಾರಥಾನ್‌ನಲ್ಲಿ ಮಾತನಾಡಿದರು. ಯುವಕರು ಶೋಕಿಗಾಗಿ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದಾರೆ. ಉತ್ತಮ ಸಮಾಜ ನಿರ್ಮಿಸುವ ಶಕ್ತಿ ಯುವಜನತೆಯಲ್ಲಿ ಇದೆ ಎಂದರು.
ಶಾಲಾ, ಕಾಲೇಜು ಆವರಣಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆ. ಇದು ಕ್ರಮೇಣ ಅವರ ಬದುಕನ್ನು ನಾಶ ಮಾಡುತ್ತದೆ. ಪಾಲಕರು ಮಕ್ಕಳ ಭವಿಷ್ಯದ ಹಿಡಿತಕ್ಕೆ ಅನೇಕ ನಿಯಮ ಹಾಕುತ್ತಿದ್ದಾರೆ. ಅಂಕಗಳ ಹಿಂದೆ ಓಡುವಂತೆ ಒತ್ತಡ ಹಾಕದೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು. ನಂತರ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸಲಾಯಿತು.
ಪಿಎಸ್‌ಐಗಳಾದ ಮಣಿಕಂಠ, ಜೆ.ಕೆ.ಅಬ್ಬಾಸ್, ಅಶೋಕ ಬೇವೂರು, ಶ್ರೀನಿವಾಸ, ವಾಸು, ಎಎಸ್‌ಐ ಜಯಪ್ರಕಾಶ್, ಸಿದ್ದಪ್ಪ, ಸಿಬ್ಬಂದಿ ಪ್ರಭು, ವೀರೇಶ್, ಕಾಂತರಾಜ, ದುರುಗಪ್ಪ, ಅಂಜಿನಪ್ಪ, ಕಲಂದರ್, ಪರಶುರಾಮ ಇತರರಿದ್ದರು.