ತುಂಗಭದ್ರಾ ಜಲಾಶಯದಲ್ಲಿ ಚುರುಕಾದ ಕ್ರಸ್ಟಿಗೇಟ್‌ಗಳ ಅಳವಡಿಕೆ

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ತಯಾರಿಕೆ ಕಾರ್ಯ ನಡೆಯುತ್ತಿರುವುದು
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ತಯಾರಿಕೆ ಕಾರ್ಯ ನಡೆಯುತ್ತಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ಎರಡು ತಿಂಗಳಲ್ಲಿ ಮುಗಿಯಲಿದೆ ತಯಾರಿ ಕಾರ್ಯ
  • ಅನುದಾನ ಬಿಡುಗಡೆ ಬೆನ್ನಲ್ಲೇ ಕಾಮಗಾರಿಗೆ ಮತ್ತಷ್ಟು ವೇಗ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತಯಾರಿಕೆ ಕಾರ್ಯ ಕೊಂಚ ವೇಗ ಪಡೆದಿದ್ದು, 21 ಕ್ರಸ್ಟ್ ಗೇಟ್ ಗಳ ತಯಾರಿಕೆ ಪೂರ್ಣಗೊಂಡಿದೆ.
2024ರ ಅ.10ರ ತಡರಾತ್ರಿ ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ಗೇಟ್ ಕಳಚಿ ದುರಂತವೇ ನಡೆದಿತ್ತು. ಒಂದೂವರೆ ವರ್ಷದ ನಂತರ ಗೇಟ್‌ಗಳ ತಯಾರಿಕೆ ಕಾರ್ಯ ನಡೆದಿದೆ. ಆದರೆ, ಆಮೆಗತಿಯಲ್ಲಿ ಸಾಗಿದ ತಯಾರಿಕೆ ಕಾರ್ಯದಲ್ಲಿ ಈಗ ವೇಗ ಬಂದಿದೆ. 33 ಕ್ರಸ್‌ಗೇಟ್‌ಗಳಲ್ಲಿ ಸದ್ಯ 21 ಗೇಟ್‌ಗಳ ತಯಾರಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನು ನಗರ ಹಾಗೂ ಗದಗನಲ್ಲಿ ತಲಾ ಒಂದು ತಯಾರಿಕೆ ಕಾರ್ಯ ನಡೆಯುತ್ತಿದ್ದು, ಎರಡು ಕ್ರಸ್ಟ್‌ಗೇಟ್‌ಗಳು ಪ್ರಗತಿಯಲ್ಲಿದೆ. ನಗರದಲ್ಲಿ ಎಲ್ಲ ಗೇಟ್‌ಗಳ ಕಚ್ಚಾ ಸಾಮಗ್ರಿಗಳು ಬಂದಿವೆ. ನಾಲ್ಕು ಕ್ರಸ್ಟ್‌ಗೇಟ್ ಮಾಡುವ ಕಚ್ಚಾ ಸಾಮಗ್ರಿಗಳು ಬಂದಿವೆ. ಇನ್ನು ಅರು ಗೇಟ್ ಗಳ ಕಚ್ಚಾ ಸಾಮಗ್ರಿಗಳು ಬರಬೇಕಿದೆ. ಇದೇ ರೀತಿ ತಯಾರಿಕೆ ಕಾರ್ಯ ಸಾಗಿದರೆ ಎರಡು ತಿಂಗಳಲ್ಲಿ ಎಲ್ಲ ಗೇಟ್‌ಗಳ ತಯಾರಿಕೆ ಮುಗಿಯಲಿದೆ.
ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸುವ ಬೃಹತ್ ಕಾಮಗಾರಿ ಪ್ರಗತಿಯಲ್ಲಿದೆ. ಅಹಮದಾಬಾದ್ ಮೂಲದ ಕಂಪನಿ 53 ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳನ್ನು ಬದಲಾಯಿಸುವ ಹೊಣೆ ಹೊತ್ತಿದೆ. ಆದರೆ, ರಾಜ್ಯ ಸರ್ಕಾರ ಕೊಟ್ಟ 10 ಕೋಟಿ ರೂ. ಅನುದಾನ ವಾಪಸ್ ಪಡೆದಿದೆ ಎಂದು ಡ್ಯಾಂ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ಆರೋಪಿಸಿದ್ದರು. ಇದರಿಂದ ಆರೋಪ-ಪ್ರತ್ಯಾರೋಪ ನಡೆದಿದ್ದವು. ರಾಜ್ಯ ಸರ್ಕಾರ ಬಾಕಿ ಇರುವ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕ್ರಸ್ಟ್ ಗೇಟ್‌ಗಳ ತಯಾರಿಕೆ ಕಾರ್ಯದಲ್ಲಿ ವೇಗ ಪಡೆದಿದೆ.

ಏಕಕಾಲಕ್ಕೆ 10 ಗೇಟ್‌ಗಳ ಪ್ರಕ್ರಿಯೆ

ಕಳೆದ ಡಿ.24ರಿಂದ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭವಾಗಿತ್ತು. ಇಲ್ಲಿಯವರೆಗೆ 18ನೇ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಈವರೆಗೆ 11 ಗೇಟ್‌ಗಳ ತೆರವು ಕಾರ್ಯ ಸಂಪೂರ್ಣವಾಗಿದೆ. ಇನ್ನು ಗೇಟ್ 02 ಮತ್ತು 32 ಗೇಟ್‌ಗಳ ತೆರವು ಕಾರ್ಯ ಪ್ರಗತಿಯಲ್ಲಿದೆ. ಸದ್ಯ 01, 04, 11, 17, 19, 20, 24, 27, 28 2 33 ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.
"

ಗೇಟ್‌ಗಳ ತಯಾರಿಕೆ ಹಾಗೂ ಅಳವಡಿಕೆ ಶರವೇಗದಲ್ಲಿ ಸಾಗಿದೆ. ಇಲ್ಲಿವರೆಗೆ 21 ಗೇಟ್‌ಗಳ ತಯಾರಿಕೆ ಪೂರ್ಣವಾಗಿದೆ. ಒಂದು ಗೇಟ್ ಅಳವಡಿಕೆ ಆಗಿದ್ದು, 10ನೇ ಗೇಟ್ ಪ್ರಗತಿಯಲ್ಲಿದೆ. ಉಳಿದ ಗೇಟ್‌ಗಳ ತಯಾರಿಕೆ ನಡೆಯುತ್ತಿದೆ. ಆದಷ್ಟು ಬೇಗ ಪೂರ್ಣ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net