ಭಾರತದ ಮೊದಲ ಕನ್ನಡ ಸಂಗೀತ ವಿಶ್ವಕೋಶ ಶೀಘ್ರದಲ್ಲೇ ಬಿಡುಗಡೆ

ಬೆಂಗಳೂರಿನ ಕನ್ನಡ ವಿವಿ ಪ್ರಾದೇಶಿಕ ಕಚೇರಿಯಲ್ಲಿ ಸಂಗೀತ ವಿಶ್ವಕೋಶದ ಸಂಪಾದಕ ಡಾ.ಆರ್.ಎಸ್.ನಂದಕುಮಾರ್ ಅವರು ಸಿದ್ಧಪಡಿಸಿದ ಕರಡು ಪ್ರತಿಯನ್ನು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಕುಲಪತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಸಂಪಾದನಾ ಮಂಡಳಿ ಸದಸ್ಯ ಎಸ್.ವಿ.ಮಠಪತಿ, ಪ್ರಾಧ್ಯಾಪಕ ಡಾ.ರೋಹಿಣಿ ಸುಬ್ಬರತ್ನ, ಡಾ.ನಾಗರಾಜರಾವ್ ಹವಾಲ್ದಾರ್, ಡಾ.ಕೃಷ್ಣಮೂರ್ತಿ ಭಟ್ಟ, ಸಂಗೀತ ಮತ್ತು ನೃತ್ಯಕಲಾ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ಪ್ರಸಾರಾಂಗದ ಪ್ರಕಟಣಾ ಸಹಾಯಕ ಡಾ.ಎಸ್.ಮೋಹನ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿಕೆ
ಹೊಸಪೇಟೆ: ಕನ್ನಡ ನಾಡಿನ ಸಮೃದ್ಧ ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸಂಗೀತ ಕ್ಷೇತ್ರಕ್ಕಾಗಿಯೇ ಮೀಸಲಾದ ಕನ್ನಡ ಸಂಗೀತ ವಿಶ್ವಕೋಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದ್ದಾರೆ.
ಬೆಂಗಳೂರಿನ ಕನ್ನಡ ವಿವಿ ಪ್ರಾದೇಶಿಕ ಕಚೇರಿಯಲ್ಲಿ ನಡೆದ ವಿಶ್ವಕೋಶದ ಕರಡು ಪರಿಶೀಲನಾ ಹಾಗೂ ಸಂಪಾದನ ಮಂಡಳಿ ಸಭೆಯಲ್ಲಿ ಮಾತನಾಡಿದರು. ಕನ್ನಡದ ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಂಗೀತ ಮಾಹಿತಿಯನ್ನು ಸಮಗ್ರವಾಗಿ ಪರಿಷ್ಕರಿಸಿ ಈ ಕೋಶವನ್ನು ಸಿದ್ಧಪಡಿಸಲಾಗಿದೆ. ಸಂಗೀತಕ್ಕಾಗಿ ಇಂತಹದೊAದು ಪ್ರತ್ಯೇಕ ವಿಶ್ವಕೋಶ ಮೂಡಿಬರುತ್ತಿರುವುದು ಭಾರತದಲ್ಲೇ ಮೊದಲಾಗಿದ್ದು, ಇದು ಕನ್ನಡ ಭಾಷೆ ಹಾಗೂ ಸಂಗೀತ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net