ಅಪರಿಚಿತರು ಸುಳಿದಾಡಿದರೆ ಠಾಣೆಗೆ ತಿಳಿಸಿ

ಅರಸೀಕೆರೆ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ್, ಸಿಪಿಐ ಮಾಹಾಂತೇಶ ಸಜ್ಜನ್, ಪಿಎಸ್‌ಐ ವಿಜಯ ಕೃಷ್ಣ, ಸಿಬ್ಬಂದಿ ಪಿಕ್ಯಾನಾಯ್ಕ, ಜಾತಪ್ಪ, ಕೊಟ್ರೇಶ್, ಗುರ್ಯನಾಯ್ಕ, ಹನುಮಂತಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಡಾ.ಸಂತೋಷ್ ಚವ್ಹಾಣ್ ಸಲಹೆ
  • ಹರಪನಹಳ್ಳಿ ಪೊಲೀಸ್ ಅಭಯ ಜಾಗೃತಿ ಜಾಥಾ
ಹರಪನಹಳ್ಳಿ: ತಾಲೂಕಿನ ಅರಸೀಕೆರೆ, ತಿಮ್ಲಾಪುರ, ಶಾಂತಪ್ರಕಾಶ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಅಭಯ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ್ ಮಾತನಾಡಿ, ಒಂಟಿಯಾಗಿ ವಾಸಿಸುವ ಮಹಿಳೆಯರು ಹಾಗೂ ಹಿರಿಯರ ಭದ್ರತೆಗೆ ಪೊಲೀಸ್ ಇಲಾಖೆ ಕ್ರಮವಹಿಸಿದ್ದು, ಗುರುತಿಸಿದ ಮನೆಗಳಿಗೆ ತೆರಳಿ ಸಮಸ್ಯೆ, ಕೊಂದುಕೊರತೆಗಳ ಮಾಹಿತಿ ಪಡೆದು, ಅವರಿಗೆ ಆತ್ಮವಿಶ್ವಾಸ ತುಂಬಲಾಗುತ್ತಿದೆ. ಅಪರಿಚಿತರು ಸುಳಿದಾಡಿದರೆ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿ, ಯಾವುದೇ ಆಪತ್ತು ಎದುರಾದಾಗ ತಕ್ಷಣವೆ 112ಗೆ ಕರೆ ಮಾಡುವಂತೆ ಮನವಿ ಮಾಡಿದರು.
ಸಿಪಿಐ ಮಾಹಾಂತೇಶ ಸಜ್ಜನ್ ಮಾತನಾಡಿ, ಸಾರ್ವಜನಿಕ ಹಿತರಕ್ಷಣಾ ಕಾಯ್ದೆ ಅನ್ವಯ ಜನ ಜಂಗುಳಿ ಸೇರುವ ಅಂಗಡಿ, ಬ್ಯಾಂಕ್, ಸಾರ್ವಜನಿಕ ಸಂಪರ್ಕ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು. ಅಲ್ಲದೆ, ಸ್ಥಿತಿವಂತರೂ ಸಿಸಿ ಕ್ಯಾಮೆರಾ ಅಳವಡಿಸಿದರೆ ಗ್ರಾಮದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net