ಶಾಲಾ ಶಿಕ್ಷಣ ಹೀಗೆ ಖಾಸಗಿ ಶಾಲೆಗಳ ಮತ್ತು ಪ್ರತಿಷಿö್ಠತ ಸರ್ಕಾರಿ ಶಾಲೆಗಳಿಗೆ ಬಲಿಯಾಗುತ್ತಿರುವುದು ಒಂದು ವಿಚಾರವಾದರೆ ಉನ್ನತ ಶಿಕ್ಷಣದ ಕತೆ ಮತ್ತೊಂದು ರೀತಿಯಲ್ಲಿ ದುರವಸ್ಥೆ ತಲುಪಿದೆ. ಜಿಲ್ಲೆಗೊಂದು ವಿವಿ ಎಂಬ ನೀತಿಗೆ ಸರ್ಕಾರಗಳು ಬದ್ಧವಾಗಿವೆ. ಆದರೆ ಈ ಹೊಸ ವಿವಿಗಳಿಗೆ ಅಗತ್ಯ ಸಂಪನ್ಮೂಲಗಳಿಲ್ಲ, ಕಟ್ಟಡಗಳಿಲ್ಲ, ಸುಸಜ್ಜಿತ ಪ್ರಯೋಗಾಲಯಗಳಿಲ್ಲ, ಗ್ರಂಥಭAಡಾರಗಳಿಲ್ಲ. ಇನ್ನೂ ಖಾಯಂ ಪ್ರಾಧ್ಯಾಪಕರಿಲ್ಲದೇ, ಅತಿಥಿ ಪ್ರಾಧ್ಯಾಪಕರನ್ನು ಅವಲಂಬಿಸಿವೆ. ಹಂಗಾಮಿ ಅತಿಥಿ ಉಪನ್ಯಾಸಕರ ಗೋಳನ್ನು ರಾಜ್ಯದಲ್ಲಿ ಕೇಳುವವರೇ ಇಲ್ಲದಂತಾಗಿದೆ. ಪಕ್ಷ ರಾಜಕಾರಣದ ಫಲವಾಗಿ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಕನ್ನಡಕ್ಕೆ ಆಗ್ರಮನ್ನಣೆ ದೋಯುವುದಿಲ್ಲವೋ ಅಲ್ಲಿಯವರೆಗೆ ಕನ್ನಡದ ನಿಜವಾದ ಪ್ರಗತಿ ಸಾದ್ಯವಿಲ್ಲ. ಸ್ವಾತಂತ್ರö್ಯ, ಸಮಾನತೆ, ಸೌಹಾರ್ದಭಾವವನ್ನು ಯುವಕರ ಮನಸ್ಸಿನಲ್ಲಿ ಬೇರೂರಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಅವರ ಜೀವನ ತತ್ವವಾಗಬೇಕು. ಅಧಿಕಾರವನ್ನು ಅವರು ಮೌನವಾಗಿ ಒಪ್ಪಿಕೊಳ್ಳದೆ ಪ್ರಶ್ನಿಸುವುದನ್ನು ಕಲಿಯ ಬೇಕು. ಸಂಕುಚಿತ ಭೌಗೋಳಿಕ ಎಲ್ಲೆಗಳನ್ನು ಮೀರಿ ಅವರು ವಿಶ್ವಮಾನವರಾಗಬೇಕು ಎಂದರು.