ಆರೋಪಗಳಿಗೆ ಕಿವಿಗೊಡದೆ ಕೆಲಸ ಮಾಡುವೆ

ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.
ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.
Published on
ಹರಪನಹಳ್ಳಿ: ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಮೈದೂರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಹಣ ಮಂಜೂರು ಮಾಡಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ಮೈದೂರು ಗ್ರಾಮದಲ್ಲಿ 2025-26 ನೇ ಸಾಲಿನ ಮುಖ್ಯಮಂತ್ರಿ ಅನುದಾನದಡಿ ಮೈದೂರಿನಿಂದ-ಬಾವಿಹಳ್ಳಿ ಹಾಗೂ ಮತ್ತಿಹಳ್ಳಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಪಶು ಆಸ್ಪತ್ರೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಉದ್ಘಾಟಿಸಿ ಬುಧವಾರ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾತ್ರ ನನ್ನ ಗುರಿಯಾಗಿದ್ದು, ಯಾವುದೇ ಆರೋಪಗಳಿಗೆ ಕಿವಿಗೊಡದೆ ನನ್ನ ಕೆಲಸ ನಾನು ಮಾಡುವೆ ಎಂದು ಅವರು ತಿಳಿಸಿದರು.
ಬಿಇಒ ಎಚ್ ಲೇಪಾಕ್ಷಪ್ಪ ಮಾತನಾಡಿ, ಶಾಸಕರು ತಾಲೂಕಿನ ವಿವಿಧೆಡೆ ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದು, ಮೈದೂರಿನಲ್ಲಿ ಮೊದಲ ಕರ್ನಾಟಕ ಪಬ್ಲಿಕ್ ಶಾಲೆಗೆ ಉದ್ಘಾಟನೆ ನೆರವೇರಿದೆ. ಈ ಭಾಗದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ನಗರ ಪ್ರದೇಶಕ್ಕೆ ತೆರಳದೆ, ಸ್ವಗ್ರಾಮದಲ್ಲಿ ಉತ್ತಮ ಶಿಕ್ಷಣ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ವೆಂಕಟೇಶ್ ವಕೀಲ, ರೆಹಮಾನ್ ಸಾಬ್, ದೇವೇಂದ್ರಗೌಡ, ಒ.ರಾಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸ್ವತಿ, ಭಾಗ್ಯಮ್ಮ, ವಿ.ಹನುಮಂತಪ್ಪ, ಜಗದೀಶ್, ನಾಗರಾಜ, ಚೌಡಪ್ಪ, ವಾಮನಗೌಡ, ನಂದಿಬೇವುರು ಅಶೋಕ, ಯೋಗೇಶ್ ಗೌಡ, ಹೇಮಂತಪ್ಪ, ಬಸವರಾಜಪ್ಪ, ಮಾಲಿಂಗಯ್ಯ, ಪಿಡಿಒ ರೇವಣಸಿದ್ದಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net