ಕತ್ತು ಸೀಳಿ ಪತ್ನಿಯ ಭೀಕರ ಹತ್ಯೆಗೈದ ಪತಿ

ಮೃತ ಪ್ರಭಾವತಿ
ಮೃತ ಪ್ರಭಾವತಿ
Published on
ಹೊಸಪೇಟೆ: ಅಕ್ರಮ ಸಂಬAಧದ ಶಂಕೆಯಿAದ ದಂಪತಿಗಳ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೊಬ್ಬಳನ್ನು ಪತಿಯೇ ಚಾಕುವಿನಿಂದ ಭೀಕರವಾಗಿ ಹತ್ಯೆಗೈದಿರುವ ದಾರುಣ ಘಟನೆ ನಗರದ ಅಗಸರಪೇಟೆಯಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ರಾಮಮೂರ್ತಿ

ಮೃತರನ್ನು ಪ್ರಭಾವತಿ (54) ಎಂದು ಗುರುತಿಸಲಾಗಿದೆ. ಆರೋಪಿ ಪತಿ ರಾಮಮೂರ್ತಿ (58) ಕಳೆದ ಎರಡು ತಿಂಗಳಿನಿAದ ಪತ್ನಿಯ ಚಾರಿತ್ರ‍್ಯದ ಬಗ್ಗೆ ಅನುಮಾನ ಪಟ್ಟು ನಿರಂತರ ಜಗಳವಾಡುತ್ತಿದ್ದನು. ಶುಕ್ರವಾರ ಪ್ರಭಾವತಿ ದೇವರ ಪೂಜೆಯಲ್ಲಿ ಮಗ್ನರಾಗಿದ್ದ ವೇಳೆ, ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ರಾಮಮೂರ್ತಿ ಹತ್ಯೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ ಹಾಗೂ ಡಿವೈಎಸ್ಪಿ ಮುರುಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬAಧ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net