ಗಣಿಬಾಧಿತ 1183 ಕುಟುಂಬಗಳಿಗೆ ವಸತಿ ಭಾಗ್ಯ

ಹೊಸಪೇಟೆಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿಕರ್ನಾಟಕಗಣಿ ಪರಿಸರ ಪುನಶ್ಚೇತನ ನಿಗಮ ಯೋಜನೆಯಡಿಗಣಿಭಾದಿತ ಪ್ರದೇಶಗಳ ಅಭಿವೃದ್ದಿ ಸಂಭAದಿಸಿದ ಸಭೆನಡೆಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿಪಿ.ವಿವೇಕಾನಂದ, ಜಿಲ್ಲಾ ನಗರಾಭಿವೃದ್ದಿಯೋಜನಾ ನಿರ್ದೇಶಕ ಮನೋಹರ್, ತಹಸೀಲ್ದಾರ್ ಶೃತಿ ಎಂ.ಮಳಪ್ಪಗೌಡ್ರ, ನಗರಸಭೆ ಪೌರಾಯುಕ್ತ ಶಿವಕುಮಾರ್ ಇತರರಿದ್ದರು.
ಹೊಸಪೇಟೆಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿಕರ್ನಾಟಕಗಣಿ ಪರಿಸರ ಪುನಶ್ಚೇತನ ನಿಗಮ ಯೋಜನೆಯಡಿಗಣಿಭಾದಿತ ಪ್ರದೇಶಗಳ ಅಭಿವೃದ್ದಿ ಸಂಭAದಿಸಿದ ಸಭೆನಡೆಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿಪಿ.ವಿವೇಕಾನಂದ, ಜಿಲ್ಲಾ ನಗರಾಭಿವೃದ್ದಿಯೋಜನಾ ನಿರ್ದೇಶಕ ಮನೋಹರ್, ತಹಸೀಲ್ದಾರ್ ಶೃತಿ ಎಂ.ಮಳಪ್ಪಗೌಡ್ರ, ನಗರಸಭೆ ಪೌರಾಯುಕ್ತ ಶಿವಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಭೆಯಲ್ಲಿಖಚಿತ ಪಡಿಸಿದ ಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ
ಹೊಸಪೇಟೆ: ಗಣಿ ಬಾಧಿತ ಪ್ರದೇಶಗಳ ಸಮಗ್ರಅಭಿವೃದ್ಧಿ ಹಾಗೂ ಅಲ್ಲಿನ ನಿವಾಸಿಗಳ ಪುನಶ್ಚೇತನಕ್ಕಾಗಿಕರ್ನಾಟಕಗಣಿ ಪರಿಸರ ಪುನಶ್ಚೇತನ ನಿಗಮದಿಂದಅAದಾಜು 1,146 ಕೋಟಿರೂ. ವೆಚ್ಚದಲ್ಲಿಅರ್ಹ ಫಲಾನುಭವಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದುಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ ತಿಳಿಸಿದರು.
ನಗರದಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರಕರ್ನಾಟಕಗಣಿ ಪರಿಸರ ಪುನಶ್ಚೇತನ ನಿಗಮ ಯೋಜನೆಯಡಿಗಣಿಭಾದಿತ ಪ್ರದೇಶಗಳ ಅಭಿವೃದ್ದಿ ಸಂಭAದಿಸಿದ ಸಭೆಯಲ್ಲಿ ಮಾತನಾಡಿದರು.
ವಸತಿ ಸಂಕೀರ್ಣಗಳ ನಿರ್ಮಾಣದ ವೇಳೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆಇರಬೇಕು. ರಸ್ತೆ ನಿರ್ಮಾಣವಾದ ನಂತರ ಪೈಪ್‌ಲೈನ್‌ಗಾಗಿರಸ್ತೆಅಗೆಯುವಂತಹ ತಪ್ಪುಗಳು ಮರುಕಳಿಸಬಾರದು.1146 ಕೋಟಿಗಳ ಬೃಹತ್ ಮೊತ್ತದಯೋಜನೆಯಾಗಿರುವುದರಿಂದ, ಪ್ರತಿ ಹಂತದಲ್ಲೂಕಾಮಗಾರಿಯಗುಣಮಟ್ಟ ಪರಿಶೀಲಿಸಬೇಕು. ಕೇವಲ ಮನೆ ಕಟ್ಟುವುದಷ್ಟೇ ನಮ್ಮಗುರಿಯಲ್ಲ. ಮನೆಗಳು ವಾಸಕ್ಕೆ ಸಿದ್ಧವಾಗುವ ಮುನ್ನವೇಕುಡಿವ ನೀರು, ಒಳಚರಂಡಿ ಮತ್ತು ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಿರಬೇಕು. 1183 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿಯಾವುದೇಲೋಪವಾಗಬಾರದು. ಅರ್ಹಗಣಿ ಬಾಧಿತ ಕುಟುಂಬಗಳಿಗೆ ಮಾತ್ರ ಈ ಸೌಲಭ್ಯತಲುಪುವಂತೆ ಹಾಗೂ ಯಾವೊಬ್ಬಅರ್ಹ ಫಲಾನುಭವಿಯೂಯೋಜನೆಯಿಂದ ಹೊರಗುಳಿಯಬಾರದು ಎಂದುಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ನಗರಾಭಿವೃದ್ದಿಯೋಜನಾ ನಿರ್ದೇಶಕ ಮನೋಹರ್ ಮಾತನಾಡಿ, ಈ ಯೋಜನೆಗೆಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಜಿಲ್ಲೆಯಗಣಿ ಬಾಧಿತ ಪ್ರದೇಶಗಳಾದ ಜಂಬುನಾಥ ಹಳ್ಳಿ ಕ್ಯಾಂಪ್‌ನಲ್ಲಿ 52 ಕುಟುಂಬ, ಕೆಎಂಎAಐ ಕ್ಯಾಂಪ್‌ನಲ್ಲಿ 94, ಬೊಂಬೆ ಕ್ಯಾಂಪ್‌ನಲ್ಲಿ 90, ಹಂಪಿನಕಟ್ಟೆಯಲ್ಲಿ 83, ಅಂಬೇಡ್ಕರ್ ನಗರದಲ್ಲಿ 84, ಕಾರಿಗನೂರು 139, ಕೊಟ್ರೇಶ್ವರ ನಗರಕ್ಯಾಂಪ್‌ನಲ್ಲಿ 113 ಕುಟುಂಬಗಳು ವಾಸವಾಗಿದ್ದು ಫಲಾನುಭವಿಗಳಿಗೆ ಈಗಾಗಲೇ ನಿವೇಶನ ಕಲ್ಪಿಸಲಾಗಿದೆ. ಶಿಕಾರಿ ಕ್ಯಾಂಪ್ ನಲ್ಲಿ 73 ಕುಟುಂಬಗಳು ವಾಸವಾಗಿದ್ದುಅದರಲ್ಲಿ 60 ಫಲಾನುಭವಿಗಳಿಗೆ ನಿವೇಶನ, ಹಕ್ಕುಪತ್ರ ವಿತರಿಸಲಾಗಿದೆ. ಇನ್ನುಳಿದ 10 ಫಲಾನುಭವಿಗಳಿಗೆ ನಿವೇಶನ ಕೊರತೆಯಿಂದ ಬಾಕಿ ಉಳಿದಿವೆ. ನಿವೇಶನ ಕಲ್ಪಿಸುವುದರಜತೆಗೆರಾಜೀವ್‌ಗಾಂಧಿ, ಇನ್ನಿತರೆ ವಸತಿಯೋಜನೆಯಡಿಇಲ್ಲಿನ ಸುಮಾರು 1,183 ಅರ್ಹ ಫಲಾನುಭವಿಗಳಿಗೆ ನೀರು, ರಸ್ತೆ, ಬೀದಿ ದೀಪ ಅಗತ್ಯ ಮೂಲ ಸೌಕರ್ಯಗಳನ್ನೊಳಗೊಂಡ ವಸತಿ ನಿರ್ಮಿಸಿ ಕೊಡಲಾಗುವುದುಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net