ಅನ್ಯಕೋಮಿನ ಯುವಕ‌ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ

ಎನ್.ನೇತ್ರಾವತಿ
ಎನ್.ನೇತ್ರಾವತಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲು
ಹೊಸಪೇಟೆ: ಅನ್ಯಕೋಮಿನ ಯುವಕ‌ನ ಕಿರುಕುಳಕ್ಕೆ ಬೇಸತ್ತು ತಾಲೂಕಿನ ಪಾಪಿನಾಯಕನಹಳ್ಳಿಯ ನಾಯಕ ಸಮುದಾಯದ ಗೃಹಿಣಿ ಎನ್.ನೇತ್ರಾವತಿ (29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೃಹಿಣಿ ಎನ್.ನೇತ್ರಾವತಿ ಹೊತ್ತುಗೊತ್ತಿಲ್ಲದೇ ಅದೇ ಗ್ರಾಮದ ತನ್ವೀರ್ (22) ಜತೆ ಮಾತನಾಡುತ್ತಿದ್ದಳು ಎಂದು ಎರಡು ತಿಂಗಳ ಹಿಂದೆ ನೇತ್ರಾವತಿಯನ್ನು ಗಂಡ ಮೋಹನ್ ಸಂಡೂರು ತಾಲೂಕಿನ ತಾರನಗರದ ತವರು ಮನೆಗೆ ಕಳುಹಿಸಿದರು. ತವರು ಮನೆಯಲ್ಲಿಯೇ ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದರು. ನಂತರ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಾಹಿತಿ ದೂರು ನೀಡಿದ್ದಾರೆ. ಪೊಲೀಸರು ತನ್ವೀರ್ ಗೆ ಇನ್ನೊಮ್ಮೆ ತಪ್ಪು ಮಾಡದಂತೆ ತಿಳಿಹೇಳಿ ಎಚ್ಚರಿಕೆ ನೀಡಿ ಕಳುಹಿಸಿದರು. ನಂತರ ಗಂಡನ ಜತೆ ನೇತ್ರಾವತಿಯನ್ನು ಕಳುಹಿಸಿದರು. ಕಳೆದ ಮಂಗಳವಾರ ಮನೆಯಲ್ಲಿ ಯಾರೂ ಇರದ‌ ವೇಳೆ ನೇತ್ರಾವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ತನ್ವೀರ್ ಹೆದರಿಸಿ, ಬೆದರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ನೇತ್ರಾವತಿ ಪಾಲಕರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ‌ ಕ್ರಮಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net