ಪಠ್ಯದ ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರಿ

ಕಂಪ್ಲಿಯಲ್ಲಿ ಜೆಸಿಐ ಕಂಪ್ಲಿ ಸೋನಾವತಿಯಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ, ಶಿಕ್ಷಕರಾದ ಎಸ್.ಶಾಮಸುಂದರರಾವ್, ಕೆ.ಚಂದ್ರಶೇಖರ ಇತರರಿದ್ದರು.
ಕಂಪ್ಲಿಯಲ್ಲಿ ಜೆಸಿಐ ಕಂಪ್ಲಿ ಸೋನಾವತಿಯಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ, ಶಿಕ್ಷಕರಾದ ಎಸ್.ಶಾಮಸುಂದರರಾವ್, ಕೆ.ಚಂದ್ರಶೇಖರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಮಟ್ಟದ ಪರೀಕ್ಷೆ
  • ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ ಹೇಳಿಕೆ

ಕಂಪ್ಲಿ: ಪ್ರೌಢಶಾಲಾ ಹಂತದಲ್ಲಿಯೇ ಪ್ರವೇಶ ಪರೀಕ್ಷೆ ಎದುರಿಸುವ ಕುರಿತು ತಿಳಿಯಲು ಜೆಸಿಐ ಸಂಸ್ಥೆ ರಾಷ್ಟ್ರೀಯ ಮಟ್ಟದ ಪರೀಕ್ಷೆ ಹಮ್ಮಿಕೊಂಡಿದೆ ಎಂದು ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ ಹೇಳಿದರು.

ಪಟ್ಟಣದ ವಿವಿಧ ಶಾಲೆಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಪ್ರವೇಶ ಪರೀಕ್ಷೆಗಳಲ್ಲಿ ಭರ್ತಿ ಮಾಡುವ ಒಎಂಆರ್ ಶೀಟ್ ಸೇರಿ ವಿವಿಧ ದಾಖಲೆಗಳನ್ನು ಭರ್ತಿ ಮಾಡುವ ಕುರಿತು ಅನುಭವ ದೊರೆಯಲಿದೆ. ಅಲ್ಲದೆ, ಪಠ್ಯದ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ ದೊರೆಯಲಿದೆ. ರಾಷ್ಟ್ರ ಮಟ್ಟದ ಮೊದಲ ಬಹುಮಾನ 1 ಲಕ್ಷ ರೂ. 2ನೇ ಬಹುಮಾನ 50 ಸಾವಿರ ರೂ., ಟ್ರೋಫಿ, ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಪ್ರಮುಖರಾದ ಡಿ.ಭರತ್, ಎಸ್.ಕೆ.ಇಮ್ತಿಯಾಜ್, ಗುರುಶಾಂತಶಾಸ್ತ್ರಿ, ಬಿ.ಜೀಲಾನ್‌ಸಾಬ್, ಮನೋಜ್ ದಾನಪ್ಪ, ಮಾನಸ, ಪವಿತ್ರಾ, ಮಂಜುನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net