ತಂಬಾಕು ಸೇವನೆಯಿಂದ ಆರೋಗ್ಯ ಸಮಸ್ಯೆ ಉಲ್ಬಣ

ಸಿಂಧನೂರು ಮೂರುಮೈಲ್ ಕ್ಯಾಂಪ್‌ನಲ್ಲಿ ಮಂಗಳವಾರ ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು. ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ಆರ್‌ಕೆಎಸ್‌ಕೆ ಸಮಾಲೋಚಕ ರಾಮಾಂಜನ್‌ಕುಮಾರ, ಪಿಎಚ್‌ಸಿಒ ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ, ಅಕ್ಕಮಹಾದೇವಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಾವು-ನೋವು
  • ಸಾರ್ವಜನಿಕ
  • ಜಾಗೃತಿ
ಸಿಂಧನೂರು: ನಗರದ ಮೂರುಮೈಲ್ ಕ್ಯಾಂಪ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಯಚೂರು, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾವು-ನೋವುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಧೂಮಪಾನ ಮತ್ತು ತಂಬಾಕು ಸೇವನೆಯು ಶ್ವಾಸಕೋಶ, ಬಾಯಿ, ಗಂಟಲು ಮತ್ತು ಮೂತ್ರಕೋಶ ಸೇರಿದಂತೆ ಕನಿಷ್ಠ 15 ಬಗೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ಇದು ಹೃದಯಾಘಾತ ಮತ್ತು ಶ್ವಾಸಕೋಶದ ತೀವ್ರ ಕಾಯಿಲೆಗಳನ್ನು ಉಂಟು ಮಾಡುತ್ತದೆ ಎಂದರು.
ಆರ್‌ಕೆಎಸ್‌ಕೆ ಸಮಾಲೋಚಕ ರಾಮಾಂಜನ್‌ಕುಮಾರ ಮಾತನಾಡಿ, ನಿಮ್ಮ ಉಸಿರು ತಂಬಾಕಿನ ಹೊಗೆಯಿಂದ ಅಲ್ಲ, ಶುದ್ಧ ಗಾಳಿಯಿಂದ ತುಂಬಿರಲಿ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ಸಮುದಾಯ ಮಟ್ಟದಲ್ಲಿ ತಂಬಾಕಿನ ಸೇವನೆ ಮತ್ತು ಉತ್ಪನ್ನಗಳು ಹೆಚ್ಚಾಗುತ್ತಿರುವುದರಿಂದ ಹದಿ ಹರಿಯದವರಲ್ಲಿ ದುಶ್ಚಟಗಳು ಹೆಚ್ಚಾಗುತ್ತಿವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net