ಅಭಿವೃದ್ಧಿಯೊಂದಿಗೆ ಆರೋಗ್ಯವೂ ಮುಖ್ಯ

ಕಾನಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಲಕ್ಷ ವೆಚ್ಚದ ಉನ್ನತೀಕರಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.
ಕಾನಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಲಕ್ಷ ವೆಚ್ಚದ ಉನ್ನತೀಕರಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.
Published on
ಕಾನಹೊಸಹಳ್ಳಿ: ಕ್ಷೇತ್ರದ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಡಿವ ನೀರಿನಂತಹ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಲಕ್ಷ ವೆಚ್ಚದ ಉನ್ನತೀಕರಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಕಾನಹೊಸಹಳ್ಳಿ-ರಂಗನಾಥನಳ್ಳಿ ರಸ್ತೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಚರಂಡಿ, ಸಿಸಿ ರಸ್ತೆ ನಿರ್ಮಾಣ, ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಜನತೆ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ನಮ್ಮ ಸುತ್ತಲಿನ ವಾತಾವರಣ ಶುಚಿಯಾಗಿದ್ದಾಗ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಆರೋಗ್ಯವೂ ಮುಖ್ಯ ಎಂದರು.
ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ ಹಾಗೂ ಗಾಣಗಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಕೂಡ್ಲಿಗಿಯಿಂದ ಉಜ್ಜಿನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅನಗತ್ಯವಾಗಿ ವೇಗ ನಿಯಂತ್ರಕಗಳನ್ನು ಅಳವಡಿಸಬಾರದು. ಅಗತ್ಯವಿರುವ ಕಡೆ ಸೂಚನಾ ಫಲಕ, ಬ್ಲಿಂಕರ್ ಅಳವಡಿಸಬೇಕು. ಕಳಪೆ ಕಾಮಗಾರಿ ಮಾಡಿದರೆ ಕ್ರಮಕೈಗೊಳ್ಳುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಸಿದರು.
25 ಲಕ್ಷ ರೂ. ವೆಚ್ಚದಲ್ಲಿ ಮಾದರಿ ಸಾಮೂಹಿಕ ಶೌಚಗೃಹ, ಮೂರು ಲಕ್ಷ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ, 3.5 ಲಕ್ಷ ರೂ. ಮೊತ್ತದಲ್ಲಿ ಪೊಲೀಸ್ ಠಾಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ, ಮೂರು ಕೋಟಿ ರೂ. ವೆಚ್ಚದಲ್ಲಿ ಕಾನಹೊಸಹಳ್ಳಿಯಿಂದ ಜುಟ್ಟಲಿಂಗಹಟ್ಟಿವರೆಗೆ ರಸ್ತೆ ವಿಸ್ತರಣೆ, ಜುಟ್ಟಲಿಂಗನಹಟ್ಟಿಯಿಂದ ರಂಗನಾಥಹಳ್ಳಿವರೆಗೆ ರಸ್ತೆ ವಿಸ್ತರಣೆ, ಇಮ್ಮಡಾಪುರದಲ್ಲಿ 50 ಲಕ್ಷ ರೂ. ಜುಟ್ಟಲಿಂಗನಹಟ್ಟಿದಲ್ಲಿ 20ಲಕ್ಷ ರೂ., ರಂಗನಾಥಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಇತ್ಯಾದಿ ಕಾಮಗಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು.
ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಬಣವಿಕಲ್ಲು ಎರ‌್ರಿಸ್ವಾಮಿ, ಜಿಪಂ ಎಇಇ ಮಲ್ಲಿಕಾರ್ಜುನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖನಾಯ್ಕ, ಬಿಇಒ ಮೈಲೇಶ್ ಬೇವೂರು, ಟಿಎಚ್‌ಒ ಡಾ.ಪ್ರದೀಪ್, ಡಾ.ವಿಶ್ವನಾಥ್, ಗ್ರಾಪಂ ಮಾಜಿ ಉಪಾಧ್ಯಕ್ಷ ಬೋರಣ್ಣ, ಸೂರ್ಯಪ್ರಕಾಶ, ಗ್ರಾಪಂ ಸದಸ್ಯರಾದ ರಮೇಶ್, ಹೊನ್ನೂರಸ್ವಾಮಿ, ಅಡೆವೆಜ್ಜರ್ ನಾಗೇಶ್, ಪಿಡಿಒ ವಿನಯಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net