ಎರಡು ತಿಂಗಳಲ್ಲಿ ಐದು ಗೇಟ್ ಪೂರ್ಣ

ತುಂಗಭದ್ರಾ ಜಲಾಶಯದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿರುವುದು.
ತುಂಗಭದ್ರಾ ಜಲಾಶಯದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದಲ್ಲಿ 9 ಕ್ರಸ್ಟ್ಗೇಟ್‌ಗಳ ಅಳವಡಿಕೆ ಪ್ರಗತಿ
ಹೊಸಪೇಟೆ: ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ತಯಾರಿಕೆ ಕಾರ್ಯ ಪ್ರಗತಿಯಲ್ಲಿದ್ದು, ಏಪ್ರಿಲ್‌ಗೆಲ್ಲ ಅಳವಡಿಕೆ ಕಾರ್ಯ ಪೂರ್ಣ ಆಗುವ ಸಾಧ್ಯತೆಯಿದೆ.
33 ಕ್ರಸ್ಟ್ಗೇಟ್ ಇರುವ ಜಲಾಶಯದಲ್ಲಿ ಎಲ್ಲಾ ಗೇಟ್ ಬದಲಿ ಕಾರ್ಯ ಕಳೆದ ಎರಡು ತಿಂಗಳಿAದ ನಡೆಯುತ್ತಿದೆ. 18, 19, 20, 32, 33ನೇ ಗೇಟ್ ಒಟ್ಟು 5 ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಪೂರ್ಣವಾಗಿದೆ. ಇದರಲ್ಲಿ 18ನೇ ಗೇಟ್ ಮಾತ್ರ ಟ್ರಯಲ್ ನಡೆಸಿ ಯಶಸ್ವಿಗೊಳಿಸಲಾಗಿದೆ. ಎಲ್ಲ ಗೇಟ್‌ಗಳ ಅಳವಡಿಕೆ ನಂತರ ಟ್ರಯಲ್ ಕಾರ್ಯ ನಡೆಯಲಿದೆ. ಇನ್ನು 01, 04, 11, 17, 24, 26, 27, 28ನೇ ಗೇಟ್ ಒಟ್ಟು 9 ಗೇಟ್‌ಗಳು ಅಳವಡಿಕೆ ಪ್ರಗತಿಯಲ್ಲಿವೆ. ಇಲ್ಲಿಯ ವರೆಗೆ 23 ಗೇಟ್‌ಗಳ ತಯಾರಿಕೆ ಕಾರ್ಯ ಪೂರ್ಣಗೊಂಡಿದೆ. ನಗರ ಹಾಗೂ ಗದಗನಲ್ಲಿ ತಲಾ ಒಂದು ತಯಾರಿಕೆ ಕಾರ್ಯ ನಡೆಯುತ್ತಿದೆ. ಇನ್ನೂ 15 ಗೇಟ್‌ಗಳ ತೆರವು ಕಾರ್ಯ ಪೂರ್ಣವಾಗಿವೆ. 03, 05, 21, 25, 26ನೇ ಗೇಟ್ ತೆರವು ಕಾರ್ಯ ಪ್ರಗತಿಯಲ್ಲಿದೆ.

ಅತಿ ದುರ್ಬಲ ಗೇಟ್‌ಗಳು

ಜಲಾಶಯದ 4, 11, 18, 19, 20, 24, 27, 28ನೇ ಗೇಟ್ ಅತಿ ದುರ್ಬಲ ಗೇಟ್‌ಗಳಿದ್ದವು. ಇದರಿಂದ ತುಂಗಭದ್ರಾ ಜಲಾಶಯ ಮಂಡಳಿ (ಟಿಬಿಬಿ) ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲಿಲ್ಲ. ಇದಲ್ಲಿ 18, 19, 20ನೇ ಗೇಟ್ ಅಳವಡಿಕೆ ಕಾರ್ಯ ಪೂರ್ಣವಾಗಿದೆ. 4, 11, 24, 27 ಮತ್ತು 28ನೇ ಅಳವಡಿಕೆ ಪ್ರಗತಿಯಲ್ಲಿವೆ.

ಏಪ್ರಿಲ್‌ಗೆ ಗುರಿ ಪೂರ್ಣ

ಜಲಾಶಯದಲ್ಲಿ 7ರಿಂದ 8 ಜನರಿರುವ ಮೂರು ತಂಡಗಳಿAದ ಗೇಟ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆರೇಳು ಜನ ಇರುವ ನಾಲ್ಕು ತಂಡಗಳು ತೆರವು ಕಾರ್ಯ ನಡೆಸುತ್ತಿದೆ. ಇವುಗಳಿಗೆ ಒಟ್ಟು 9 ಕ್ರೇನ್‌ಗಳು ಕೆಲಸ ಮಾಡುತ್ತಿವೆ. ನಗರದದಲ್ಲಿ 35 ಜನ, ಗದಗನಲ್ಲಿ 35 ಜನ ಗೇಟ್ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ತಯಾರಿಕೆ ಕಾರ್ಯ ಸಾಗಿದರೆ ಏಪ್ರಿಲ್ ತಿಂಗಳಲ್ಲಿ ಎಲ್ಲ ಗೇಟ್‌ಗಳ ತಯಾರಿಕೆ ಮುಗಿಯಲಿದೆ. ಟ್ರಯಲ್ ಸೇರಿದಂತೆ ಉಳಿದ ಸಣ್ಣಪುಟ್ಟ ಕಾರ್ಯಗಳನ್ನು ಮೇ ತಿಂಗಳಿಗೆಲ್ಲ ಮುಗಿಯಲಿದೆ. ಟೆಂಡರ್ ಅವರಿಯಲ್ಲಿ ಎಲ್ಲಾ ರೀತಿಯ ಕಾರ್ಯ ಪೂರ್ಣಗೊಳಿಸಲು ಟಿಬಿಬಿ ಗುರಿ ಹೊಂಡಿದೆ.
"

ಗೇಟ್‌ಗಳ ತಯಾರಿಕೆ ಹಾಗೂ ಅಳವಡಿಕೆ ವೇಗದಿಂದ ಕಾರ್ಯ ಸಾಗಿದೆ. 23 ಗೇಟ್‌ಗಳ ತಯಾರಿಕೆ ಪೂರ್ಣವಾಗಿದೆ. ಐದು ಗೇಟ್ ಪೂರ್ಣಗೊಂಡಿದೆ. ಉಳಿದೆಲ್ಲ ಗೇಟ್‌ಗಳ ಅಳವಡಿಕೆ ಏಪ್ರಿಲ್‌ನಲ್ಲಿ ಪೂರ್ಣ. ಮೇ ತಿಂಗಳ ಅಂತ್ಯದ ವರೆಗೆ ಟ್ರಯಲ್ ಹಂತ ಕೂಡ ಮುಗಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net