ಗತವೈಭವದಿಂದ ಸಹಜ ಸ್ಥಿತಿಗೆ ಹಂಪಿ

ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಮುರಿದು ಬಿದ್ದಿರುವ ಕುರ್ಚಿಗಳು.
ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಮುರಿದು ಬಿದ್ದಿರುವ ಕುರ್ಚಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ಸವದ ಸಂಭ್ರಮಕ್ಕೆ ತೆರೆ
  • ರಾಜ ಬೀದಿಗಳಲ್ಲಿ ಮರೆಯಾದ ಜನ ಜಾತ್ರೆ
ಮಂಜುನಾಥ ಅಯ್ಯಸ್ವಾಮಿ, ಹೊಸಪೇಟೆ
ಉತ್ಸವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಜನಜಂಗುಳಿಯಿಂದ ಕೂಡಿದ್ದ ಹಂಪಿಯ ರಾಜಬೀದಿಗಳು, ಸಂಭ್ರಮ ಮುಗಿದ ನಂತರದ ಸೋಮವಾರ ಜನಜಾತ್ರೆಯಿಲ್ಲದೆ ಬಿಕೋ ಎನ್ನುತ್ತಿದ್ದವು.
ಉತ್ಸವಕ್ಕಾಗಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಗಳನ್ನು ತೆರವುಗೊಳಿಸುವ ಕಾರ್ಯ ಸೋಮವಾರ ಬೆಳಗ್ಗೆಯಿಂದಲೇ ಆರಂಭವಾಯಿತು. ವೇದಿಕೆಗಳಿಗೆ ಅಳವಡಿಸಲಾಗಿದ್ದ ಸೌಂಡ್ ಮತ್ತು ಲೈಟ್ ಸಿಸ್ಟಂಗಳು ಹಾಗೂ ಕುರ್ಚಿಗಳನ್ನು ಕಾರ್ಮಿಕರು ನಾಗಿಸುತ್ತಿದ್ದ ದೃಶ್ಯ ಕಂಡುಬಂದಿತು. ಸಿರಿಧಾನ್ಯ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಕರಕುಶಲ ವಸ್ತು ಪ್ರದರ್ಶನದ ಮಳಿಗೆಗಳನ್ನೂ ತೆರವುಗೊಳಿಸಲಾಯಿತು. ಕಳೆದ ಮೂರು ದಿನಗಳಿಂದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಐದೂ ವೇದಿಕೆಗಳು ಈಗ ಸ್ತಬ್ಧವಾಗಿದ್ದು, ಬೆರಳೆಣಿಕೆಯಷ್ಟು ಪ್ರವಾಸಿಗರನ್ನು ಹೊರತುಪಡಿಸಿದರೆ ಹಂಪಿಯ ಬೀದಿಗಳಲ್ಲಿ ಶಾಂತತೆ ನೆಲೆಸಿದೆ. ವಾಹನ ಸಂಚಾರಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿರುವುದರಿಂದ ಸ್ಥಳೀಯರು ಎಂದಿನಂತೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ.

ಮುರಿದು ಬಿದ್ದ ಆಸನಗಳು

ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಮೂರು ದಿನಗಳ ಕಾಲ ಸಿನಿ ತಾರೆಯರು ಸಂಗೀತದ ಮಿಂಚು ಹರಿಸಿದರು. ಪ್ರೇಕ್ಷಕರು ಮೈಮರೆತು ಕುಣಿದ ಪರಿಣಾಮವಾಗಿ ವೇದಿಕೆಯ ಮುಂಭಾಗದಲ್ಲಿದ್ದ ನೂರಾರು ಆಸನಗಳು ಮುರಿದು ಬಿದ್ದಿವೆ. ಈಗ ಜನಸ್ತೋಮವಿಲ್ಲದ ಮೈದಾನ ಶೂನ್ಯವಾಗಿ ಭಾಸವಾಗುತ್ತಿದೆ.

ಪೌರಕಾರ್ಮಿಕರಿಗೆ ಆಗಸದಿಂದ ಹಂಪಿ ದರ್ಶನ

ಉತ್ಸವದ ನಂತರ ಹಂಪಿಯ ಪ್ರಮುಖ ಸ್ಥಳಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು. ಉತ್ಸವದ ಯಶಸ್ವಿಗಾಗಿ ಶ್ರಮಿಸಿದ ಪೌರಕಾರ್ಮಿಕರನ್ನು ಗೌರವಿಸುವ ಸಲುವಾಗಿ ಸೋಮವಾರ ಅವರಿಗೆ ಹೆಲಿಕಾಪ್ಟರ್ ಮೂಲಕ ಹಂಪಿ ದರ್ಶನ ಮಾಡಿಸಲಾಯಿತು. ಕಳೆದ ಹಲವು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದ ಅಧಿಕಾರಿಗಳು ಉತ್ಸವ ಯಶಸ್ವಿಯಾದ ನಿರಾಳ ಭಾವದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net