ಕಷ್ಟಗಳನ್ನು ಮೆಟ್ಟಿ ನಿಲ್ಲಲು ಗುರುಬಲ ಅಗತ್ಯ

ಕಂಪ್ಲಿ ಗುರುಮಠದಲ್ಲಿ ಶ್ರೀ ಶರಣ ವೀರ ಗೊಲ್ಲಾಳ ನಾಟಕದ ಪ್ರದರ್ಶಿಸಲಾಯಿತು. ಕಲಾವಿದರಾದ ಜಗದೀಶ್, ಶಿವಕುಮಾರ್, ವಿಜಯಕುಮಾರ್, ವರುಣ್ ಇತರರು ಅಭಿನಯಿಸಿದರು.
ಕಂಪ್ಲಿ ಗುರುಮಠದಲ್ಲಿ ಶ್ರೀ ಶರಣ ವೀರ ಗೊಲ್ಲಾಳ ನಾಟಕದ ಪ್ರದರ್ಶಿಸಲಾಯಿತು. ಕಲಾವಿದರಾದ ಜಗದೀಶ್, ಶಿವಕುಮಾರ್, ವಿಜಯಕುಮಾರ್, ವರುಣ್ ಇತರರು ಅಭಿನಯಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಘನಮಠಯ್ಯ ಹಿರೇಮಠ ಅಭಿಮತ
  • ಕಂಪ್ಲಿ 264ನೇ ಹುಣ್ಣಿಮೆ ಕಾರ್ಯಕ್ರಮ
ಕಂಪ್ಲಿ: ಗುರುವಿನ ತತ್ವಾದರ್ಶ, ಉಪದೇಶಗಳನ್ನು ಪಾಲಿಸಿದರೆ ಹಸನಾದ ಬದುಕು ಸಾಗಿಸಲು ಸಾಧ್ಯ ಎಂದು ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಹೇಳಿದರು.
ಗೊಗ್ಗ ವಿಶಾಲಾಕ್ಷಮ್ಮ ಸ್ಮರಣಾರ್ಥ ಗುರುಮಠದಲ್ಲಿ ಓದ್ಸೋ ಶಿವಾನಂದಾಶ್ರಮದಿಂದ ಆಯೋಜಿಸಿದ್ದ 264ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಕುರಿತು ಉಪನ್ಯಾಸ ನೀಡಿ, ಬಾಳಿನಲ್ಲಿ ಬರುವ ಸಂಕಷ್ಟಗಳನ್ನು ಮೆಟ್ಟಿನಿಲ್ಲಲು ಗುರುವಿನ ಆಶೀರ್ವಾದದ ಬಲದ ಅಗತ್ಯವಿದೆ ಎಂದರು. ಕಲ್ಗುಡಿ ಬಸಂತಮ್ಮ ರಚಿಸಿದ ಶ್ರೀ ಶರಣವೀರ ಗೊಲ್ಲಾಳ ನಾಟಕವನ್ನು ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಾದ ಜಗದೀಶ್ ಪಾರ್ವತಿಯಾಗಿ, ಶಿವಕುಮಾರ್ ಪರಮೇಶ್ವರನಾಗಿ, ವೀರಯ್ಯ ಗೊಲ್ಲಾಳನಾಗಿ, ವಿಜಯಕುಮಾರ್ ಮಲ್ಲಪ್ಪನಾಗಿ, ವರುಣ್ ಮಲ್ಲಮ್ಮಳಾಗಿ ಅಭಿನಯಿಸಿದರು.
ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಗೊಗ್ಗ ಶಾಂತಾ, ಚನ್ನಬಸವರಾಜ, ಗೊಗ್ಗ ಶೋಭಾ ಗುರುಸಿದ್ಧಯ್ಯ, ಶಾರದಾ ಬಸವಲಿಂಗಯ್ಯ, ಮಂಜುಳಾ ಸತೀಶ್, ಎಸ್.ಡಿ.ಬಸವರಾಜ, ಕೆ.ಎಂ.ಚಂದ್ರಶೇಖರಸ್ವಾಮಿ, ಎಚ್.ಎಂ.ಜಗದೀಶ, ಮೆಟ್ರಿ ಯೋಗಾಚಾರ್, ಕಲ್ಗುಡಿ ನಾಗರತ್ನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net