ವಿವಿಗಳ ನಿರ್ವಹಣೆ ಸರ್ಕಾರಗಳು ವಿಫಲ

ಕನ್ನಡ ವಿವಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು.
ಕನ್ನಡ ವಿವಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಂ.ಸಿ.ಸುಧಾಕರ್ ಸರ್ಮಥನೆ
ಹೊಸಪೇಟೆ: ಕನ್ನಡ ನಾಡು, ನುಡಿ, ನೆಲ, ಜಲ, ಇತಿಹಾಸ ಹಾಗೂ ಪರಂಪರೆಗಳ ಕುರಿತ ಹೊಸ ರೀತಿಯ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಕನ್ನಡ ವಿವಿ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಸಂಶೋಧನೆಗೆ ವಿವಿಯಲ್ಲಿ ಪೂರಕ ವಾತಾವರಣವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಕನ್ನಡ ವಿವಿಯಲ್ಲಿ ನಡೆದ ನುಡಿಹಬ್ಬದಲ್ಲಿ ಮಾತನಾಡಿ, ಸರ್ಕಾರಗಳು ದೂರದೃಷ್ಟಿಯಿಂದ ಜಿಲ್ಲೆಗೊಂದು ವಿವಿ ಸ್ಥಾಪನೆ ಮಾಡಿದವು. ಆದರೆ, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ನೇಮಕ ಹಾಗೂ ಮೂಲಸೌಕರ್ಯ ನೀಡುವಲ್ಲಿ ವಿಫಲವಾಗಿವೆ. ನೌಕರರಿಗೆ ಪಿಂಚಣಿ ನೀಡುವಲ್ಲಿಯೂ ಸಮಸ್ಯೆ ಆಗಿದೆ ಎಂದು ಹೇಳಲು ನೋವಿನ ಸಂಗತಿಯಾಗಿದೆ. ವಿವಿಗಳು ಹೆಚ್ಚಿದಾಗ ಕಾಲೇಜಿನ ಕೊರತೆಗಳಾಗಿ ಆರ್ಥಿಕ ಹೊರೆ ಆಗುತ್ತದೆ. ಸರ್ಕಾರದಿಂದ ಅನುದಾನದ ಕೊರತೆಯೂ ಆಗುತ್ತದೆ.
ತಂತ್ರಜ್ಞಾನ ಬೆಳದಿದ್ದು, ವಿವಿಗಳಲ್ಲಿ ಎಐಗಳನ್ನು ಬಳಕೆ ಮಾಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿಕೊಳ್ಳಬೇಕು. ವಿಶೇಷ ವಿವಿಗಳಿಗೆ ಯಾವ ರೀತಿಯಲ್ಲಿ ಅನುದಾನ ನೀಡಬೇಕು ಎಂದು ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಕನ್ನಡ ವಿವಿಗೆ ಕಳೆದ ವರ್ಷ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ವರದಿಯಾಗಿತ್ತು. ಅಂದು ಕೂಡ ಸರ್ಕಾರ ಅನುದಾನ ನೀಡಿದೆ. ಇತ್ತೀಚೆಗೆ ಎರಡು ಕೋಟಿ ರೂ. ಅನುದಾನ ನೀಡಿದೆ. ನಾನು ಕೂಡ ಗ್ರಾಮೀಣ ಭಾಗದಿಂದ ಬಂದವನು.
ಇಲ್ಲಿನ ಶಿಕ್ಷಣದ ಬಗ್ಗೆ ಅರಿವಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಭಾಷಾಭಿಮಾನ ಇದೆ. ಆದ್ದರಿಂದ ಸಂವಿಧಾನದ ಅಡಿಯಲ್ಲಿ ಸರ್ಕಾರ ಕೆಲಸ ಮಾಡಲಿದೆ. ಮುಖ್ಯಮಂತ್ರಿಗಳೊAದಿಗೆ ಅನುದಾನದ ಕುರಿತು ಗಂಭೀರವಾಗಿ ಚರ್ಚಿಸಿ ಸಾಧ್ಯವಾದಷ್ಟು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net