ಕಾನಹೊಸಹಳ್ಳಿ: ಆಧ್ಯಾತ್ಮಿಕ ಚಿಂತೆನೆಯಿಂದ ಉತ್ತಮ ಗುಣಗಳು ಬೆಳೆಸಿಕೊಂಡು ಸನ್ಮಾರ್ಗ ದಲ್ಲಿ ನಡೆಯಬೇಕು ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಸಮೀಪದ ಬಯಲುತುಂಬರಗುದ್ದಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಸ್ವಾಮಿ ರಥೋತ್ಸವದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಸ್ವಾೃಸ್ಥ ಮನಸ್ಸು ಉತ್ತಮ ಆರೋಗ್ಯಕ್ಕೆ ಕಾರಣವಾಗಲಿದೆ. ಒಳ್ಳೆಯ ವಿಚಾರಗಳನ್ನು ತುಂಬಿಕೊಂಡಾಗ ಸತ್ಕಾರ್ಯಗಳು ನಡೆಯುತ್ತವೆ. ಪಾದಪೂಜೆ, ಕೈಮುಗಿಯುವುದು ಸೇರಿ ಗುರುವಿನ ಆರಾಧನೆಗೆ ಹಲವು ಬಗೆಗಳಿವೆ ಎಂದರು. ಪ್ರಮುಖರಾದ ಎಚ್.ಎಂ.ವೀರಭದ್ರಯ್ಯ, ಗೂಳೆರ್ ಬಸವರಾಜ್, ಮೂಲೆಮನೆ ಬಸವರಾಜ, ಪತ್ರೆಜ್ಜರ್ ವೀರೇಶ್, ಪತ್ರೆಣ್ಣರ್ ರುದ್ರೇಶ್, ಪೂಜಾರ ಮೂಗಪ್ಪ, ಜಿ.ಗುಳೆಪ್ಪ ಇತರರಿದ್ದರು.
"
ನಾಡಿನ ಮಠಮಾನ್ಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ ಬಡಮಕ್ಕಳ ಪಾಲಿಗೆ ಶೈಕ್ಷಣಿಕ ಕೇಂದ್ರಗಳಾಗಿವೆ. ಎಲ್ಲ ವರ್ಗದ ಜನರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸುತ್ತಿವೆ.