ಮನೆಯಿಂದಲೇ ಇ-ಖಾತಾ ಪಡೆಯಿರಿ

ಹೊಸಪೇಟೆಯಲ್ಲಿ ಗುರುವಾರ ಶಾಸಕ ಎಚ್.ಆರ್.ಗವಿಯಪ್ಪ ಇ ಖಾತ ಕೈಪಿಡಿ ಬಿಡುಗಡೆ ಮಾಡಿದರು. ಪೌರಾಯುಕ್ತ ಶಿವಕುಮಾರ್ ಯರಗುಡಿ ಇದ್ದರು.
ಹೊಸಪೇಟೆಯಲ್ಲಿ ಗುರುವಾರ ಶಾಸಕ ಎಚ್.ಆರ್.ಗವಿಯಪ್ಪ ಇ ಖಾತ ಕೈಪಿಡಿ ಬಿಡುಗಡೆ ಮಾಡಿದರು. ಪೌರಾಯುಕ್ತ ಶಿವಕುಮಾರ್ ಯರಗುಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಆರ್.ಗವಿಯಪ್ಪ ಕರೆ
ಹೊಸಪೇಟೆ: ಪೌರಾಡಳಿತ ಇಲಾಖೆ ಜಾರಿಗೆ ತಂದ ಇ-ಖಾತಾ ಸೌಕರ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.
ನಗರದಲ್ಲಿನ ಶಾಸಕರ ಕಚೇರಿಯಲ್ಲಿ ಗುರುವಾರ ಕೈಪಿಡಿ ಕೂಡ ಬಿಡುಗಡೆ ಮಾಡಿ ಮಾತನಾಡಿದರು.
ಇ–ಆಸ್ತಿ ತಂತ್ರಾAಶ ಸರಳೀಕರಣ ಮಾಡಲಾಗಿದೆ. ಆಸ್ತಿ ಮಾಲೀಕರು ಯಾವುದೇ ಮಧ್ಯವರ್ತಿಗಳಿಲ್ಲದೇ, ಅಧಿಕಾರಿ ಸಂಪರ್ಕಿಸದೇ ತಮ್ಮ ಮನೆಯಲ್ಲಿ ಕುಳಿತು ಇ-ಖಾತಾ ಪಡೆದುಕೊಳ್ಳಬಹುದು. ಇದರಿಂದ ಅಕ್ರಮಗಳು ತಡೆಯಬಹುದು. ಆದಷ್ಟು ಬೇಗನೇ ಜನ ಸಾಮಾನ್ಯರಿ ಇ-ಖಾತಾ ಕೈಸೇರಲಿದೆ ಎಂದರು.
ಪೌರಾಯುಕ್ತ ಶಿವಕುಮಾರ್ ಯರಗುಡಿ ಮಾತನಾಡಿ, ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ- ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಸದರಿ ಮಾಹಿತಿಗಳ ಆಧಾರದ ಬಗ್ಗೆ ತಕರಾರಿದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾAಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು. ನಮೂದಿಸಿದ ಮಾಹಿತಿ ನಿಖರತೆಯನ್ನು ಪರಿಶೀಲಿಸಿ ಅನುಮೋದಿಸಲಾಗುವದು. ಅಂತಿಮವಾಗಿ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ಪಡೆದುಕೊಳ್ಳಬಹುದು. ಬೇಕಾದ ದಾಖಲಾತಿಗಳು ಮಾಲೀಕರ ಭಾವಚಿತ್ರ ಮತ್ತು ಆಧಾರ,ಆಸ್ತಿ ತೆರಿಗೆ ಎಸ್ ಎ ಎಸ್ ಚಲನ ಸಂಖ್ಯೆ, ಸ್ವತ್ತಿನ ಕ್ರಯ/ ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್ ಆರ್ ಸಂಖ್ಯೆ ( ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ), ಸ್ವತ್ತಿನ ಛಾಯಾಚಿತ್ರ, ಸ್ವತ್ತಿಗೆ ಸಂಭAಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳ ಸಮೇತ ಆನ್ ಲೈನನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ದಾಖಲಾತಿ ಸಲ್ಲಿಸಬಹುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net