ಹೊಸಪೇಟೆ ತಹಸೀಲ್ ಕಚೇರಿ ಸ್ಥಾನಿಕಾಧಿಕಾರಿ ನಾಗರಾಜ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಗೌರವ್ಯಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಅಧ್ಯಕ್ಷ ಬಿಸಾಟಿ ತಾಯಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಪತ್ತಾರ್, ಪ್ರಮುಖರಾದ ಹನುಮಂತಪ್ಪ ಗೌಳಿ, ಪಿ.ಲೀಲಾ, ಇತರರಿದ್ದರು.
ಅಖಿಲ ಭಾರತ ರಾಜ್ಯ ಸರ್ಕಾರಿ ಪಿಂಚಣಿದಾರರ ಫೆಡರೇಶನ್‌ನಿಂದ ಪ್ರತಿಭಟನೆ
ಹೊಸಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರಾಜ್ಯ ಸರ್ಕಾರಿ ಪಿಂಚಣಿದಾರರ ಫೆಡರೇಶನ್ ನಿಂದ ನಗರದ ತಹಸೀಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಹಣಕಾಸು ಮಸೂದೆ (ಮಾನ್ಯತಾ ಕಾಯಿದೆ) 2025ನ್ನು ರದ್ದುಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಎಲ್ಲಾ ನೌಕರರಿಗೆ ಮರು ಸ್ಥಾಪಿಸಬೇಕು. ಎಲ್ಲಾ ರಾಜ್ಯಗಳಲ್ಲಿ ಡಿ ಎ (ತುಟ್ಟೀ ಭತ್ತೆ) ಯನ್ನು ಕೇಂದ್ರ ಸರ್ಕಾರದ ಪಿಂಚಣಿದಾರರ ಮಟ್ಟಕ್ಕೆ ಹೆಚ್ಚಿಸಬೇಕು. 2025ರ ಡಿ.31ರ ಮೊದಲು ನಿವೃತ್ತರಾದ ಎಲ್ಲಾ ಸಿಬ್ಬಂದಿಗೆ ಎಂಟನೇ ಕೇಂದ್ರ ವೇತನ ಆಯೋಗದ ಲಾಭಗಳನ್ನು ವಿಸ್ತರಿಸಲಿ. ಪಿಂಚಣಿ ಕಮ್ಯುಟೇಶನ್ ಮೊತ್ತಗಳನ್ನು 11 ವರ್ಷಗಳ ವರೆಗೆ ಮಾತ್ರ ಕಡಿತಗೊಳಿಸಬೇಕು. ಕೋವಿಡ್ ಅವಧಿಯ 18 ತಿಂಗಳ ಬಿಎ ಬಾಕಿಯನ್ನು ಬಡ್ಡಿಯೊಂದಿಗೆ ಪಾವತಿಸಬೇಕು.
ನೌಕರರ ಹಿತಾಸಕ್ತಿಗೆ ಸಂಬAಧಿಸಿದ ನ್ಯಾಯಾಲಯದ ತೀರ್ಪುಗಳನ್ನು ಎಲ್ಲರಿಗೂ ಅನ್ವಯಿಸಬೇಕು. ರೈಲು, ವಿಮಾನ, ಎಸಿ ಬಸ್‌ಗಳಲ್ಲಿ ಪ್ರಯಾಣ ದರಗಳಲ್ಲಿ ರಿಯಾಯಿತಿ ನೀಡಬೇಕು. ಎಲ್ಲಾ ರಾಜ್ಯಗಳು ದೇಶದ ಎಲ್ಲಾ ಪಿಂಚಣಿದಾರರಿಗೆ ವೈದ್ಯಕೀಯ ವಿಮೆ ನೀಡುವ ಮೂಲಕ ಆರೋಗ್ಯ ಸೇವೆ ಒದಗಿಸಬೇಕು. ವಯಸ್ಸಿನ ಆಧಾರದ ಮೇಲೆ ಪಿಂಚಣಿಯನ್ನು ಹೆಚ್ಚಿಸಬೇಕು. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಖಾಸಗಿಕರಣವನ್ನು ನಿಲ್ಲಿಸಬೇಕು. ಹೊಸ ನಾಲ್ಕು ಅಪಾಯಕಾರಿ ಕಾರ್ಮಿಕ ಕಾನೂನುಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.