ಯುವ ಪೀಳಿಗೆ ಮಾದಕ ವಸ್ತುಗಳ ಜಾಲದಿದ ಮುಕ್ತರಾಗಿ

ಹೊಸಪೇಟೆ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಸೈಕಲ್ ಜಾಥಾಕ್ಕೆ ಎಸ್ಪಿ ಎಸ್.ಜಾಹ್ನವಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎಎಸ್ಪಿ ಜಿ.ಮಂಜುನಾಥ, ಡಿವೈಎಸ್‌ಪಿ ಪಿ.ಮುರಳಿಧರ್, ಸಂಚಾರಿ ಠಾಣೆ ಪಿಐ ಹುಲಗಪ್ಪ ಇತರರಿದ್ದರು.
ಹೊಸಪೇಟೆ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಸೈಕಲ್ ಜಾಥಾಕ್ಕೆ ಎಸ್ಪಿ ಎಸ್.ಜಾಹ್ನವಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎಎಸ್ಪಿ ಜಿ.ಮಂಜುನಾಥ, ಡಿವೈಎಸ್‌ಪಿ ಪಿ.ಮುರಳಿಧರ್, ಸಂಚಾರಿ ಠಾಣೆ ಪಿಐ ಹುಲಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೈಕಲ್ ಜಾಥಾ ಮೂಲಕ ಎಸ್ಪಿ ಎಸ್.ಜಾಹ್ನವಿ ಸಂದೇಶ
ಹೊಸಪೇಟೆ: ಮಾದಕ ವ್ಯಸನದಿಂದ ದೂರವಿರಿ, ಆರೋಗ್ಯವಂತ ಸಮಾಜವನ್ನು ನಿರ್ಮಿಸಿ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ನಿಮಿತ್ತ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯು ಕೇವಲ ವ್ಯಕ್ತಿಯ ಅನಾರೋಗ್ಯಕ್ಕೆ ಮಾತ್ರವಲ್ಲದೆ, ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ದೂಡುತ್ತದೆ. ಹಲವು ಯುವಕರು ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ನಿಮ್ಮ ಸುತ್ತಮುತ್ತ ಯಾರಾದರೂ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದರೆ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಕರೆ ನೀಡಿದರು.
ಯುವ ಪೀಳಿಗೆ ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ಆರೋಗ್ಯವಾಗಿಡಬಹುದು. ಈ ಸೈಕಲ್ ಜಾಥಾ ಕೇವಲ ಸಾಂಕೇತಿಕವಲ್ಲ, ಇದು ವ್ಯಸನ ಮುಕ್ತ ಸಮಾಜದ ಕಡೆಗಿನ ಮೊದಲ ಹೆಜ್ಜೆ ಎಂದರು.
ಪುನೀತ್ ರಾಜ್‌ಕುಮಾರ್ ವೃತ್ತದಿಂದ ಆರಂಭವಾದ ಈ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾದಕ ವಸ್ತು ಮುಕ್ತ ಸಮಾಜದ ನಿರ್ಮಾಣಕ್ಕೆ ಕರೆ ನೀಡಿತು. ಈ ಜಾಗೃತಿ ಅಭಿಯಾನದಲ್ಲಿ ನೂರಾರು ಶಾಲಾ ಮಕ್ಕಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಮಾದಕ ವಸ್ತುಗಳ ವಿರುದ್ಧದ ಈ ಹೋರಾಟ ನಿರಂತರವಾಗಿ ನಡೆಯಬೇಕು ಎಂಬ ಆಶಯದೊಂದಿಗೆ ಜಾಥಾ ಯಶಸ್ವಿಯಾಗಿ ಸಂಪನ್ನಗೊAಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net