ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ

ಹಂಪಿ ಮಹಾ ನವಮಿ ದಿಬ್ಬದ ಬಳಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ವಿದೇಶಿ ಪ್ರವಾಸಿಗರ ಜತೆ ಮಾತನಾಡಿದರು. ಮಾಜಿ ಸಚಿವ ಆನಂದ್ ಸಿಂಗ್ ಇತರರಿದ್ದರು.
ಹಂಪಿ ಮಹಾ ನವಮಿ ದಿಬ್ಬದ ಬಳಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ವಿದೇಶಿ ಪ್ರವಾಸಿಗರ ಜತೆ ಮಾತನಾಡಿದರು. ಮಾಜಿ ಸಚಿವ ಆನಂದ್ ಸಿಂಗ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅಧಿಕಾರಿಗಳಿಗೆ ಸೂಚನೆ
  • ಕಳಪೆ ನಿರ್ವಹಣೆ ಸಚಿವ ಗರಂ
ಹೊಸಪೇಟೆ: ಹಂಪಿ ಧಾರ್ಮಿಕ, ಐತಿಹಾಸಿಕ ಮಾತ್ರವಲ್ಲ ಪ್ರವಾಸೋದ್ಯಮಕ್ಕೆ ಬೇಕಿರುವ ಅಗತ್ಯ ಕ್ರಮಕೈಗೊಳ್ಳಬೇಕಿರುವುದು ನಮ್ಮ ಧರ್ಮವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶ್ವವಿಖ್ಯಾತ ಹಂಪಿಯ ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂಪಿಯ ಐತಿಹಾಸಿಕ ಸ್ಮಾರಕಗಳಾದ ರಾಣಿ ಸ್ನಾನಗೃಹ, ಮಹಾ ನವಮಿ ದಿಬ್ಬ, ಕಮಲ್ ಮಹಾಲ್, ಉಗ್ರ ನರಸಿಂಹ, ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಇತರೆ ಸ್ಮಾರಕಗಳಿಗೆ ಬೇಟಿ ನೀಡಿದರು. ಈ ವೇಳೆ ಸ್ಮಾರಕಗಳ ಬಳ ಅನೈರ್ಮಲ್ಯ ವಾತಾವರಣ ಕಂಡು ಗರಂ ಆದರು. ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ವಚ್ಛತೆ ಮತ್ತು ಒಟ್ಟಾರೆ ನಿರ್ವಹಣೆ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರು.
ಸಾಕಷ್ಟು ನೈರ್ಮಲ್ಯ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಪಾರಂಪರಿಕ ತಾಣದಲ್ಲಿ ಪ್ರಮುಖವಾಗಿ ಕುಡಿವ ನೀರು, ಶೌಚಗೃಹ ಸೇರಿದಂತೆ ಮೂಲಸೌಕರ್ಯ ಒದಗಿಸುವುದು ನಮ್ಮ ಧರ್ಮವಾಗಿದೆ. ಇನ್ನೂ ಪ್ರತಿದಿನ ಬರುವ ಸಾವಿರಾರು ಪ್ರವಾಸಿಗರು ಮತ್ತು ಪ್ರವಾಸಿಗರ ಪರಿಸ್ಥಿತಿ ಇನ್ನೂ ಹೇಗಿರುತ್ತದೆ. ಒಬ್ಬೊಬ್ಬ ಪ್ರವಾಸಿಗ ಇಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಚಾರ ಪಡಿಸಿದರೆ, ಈ ಪ್ರವಾಸಿ ತಾಣದ ಬಗ್ಗೆ ಕಟ್ಟ ಮಾಹಿತಿ ತಲುಪಲಿದೆ. ಆದ್ದರಿಂದ ಇಲ್ಲಿನ ಸ್ಮಾರಕಗಳ ರಕ್ಷಣೆ ಜತೆ ಪ್ರವಾಸಿಗರ ಅನುಕೂಲಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡು ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ದೇಗುಲ, ಸ್ಮಾರಕಗಳ ಬಳಿಯ ಪುಷ್ಕರಣಿಯಲ್ಲಿ ನೀರು ಕೊಳೆಯದಂತೆ ನೋಡಿಕೊಳ್ಳಿ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾದ್ಯತೆ ಇದೆ. ಸ್ಮಾರಕಗಳ ಬಳಿ ಹಳೆ ಹಾಗೂ ಈಗಿನ ಚಿತ್ರಗಳನ್ನು ಮಾಹಿತಿ ನೀಡುವಂತೆ ಪೋಟೋಗಳನ್ನು ಅಳವಡಿಕೆ ಮಾಡಬೇಕು. ಆನ್ಲೈನ್ ನಲ್ಲಿ ಸ್ಮಾರಕಗಳ ಮಾಹಿತಿ ಎಲ್ಲ ಭಾಷೆಯಲ್ಲಿ ಹೇಳುವಂತ ಸಾಫ್ಟ್‌ವೇರ್ ಗೆ ಕ್ರಮಕೈಗೊಳ್ಳಿ. ಹಾಳಾಗುತ್ತಿರುವ ಸ್ಮಾರಕಗಳ ರಕ್ಷಣೆ ಮಾಡಬೇಕಿದೆ. ಜತೆಗೆ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಎಂದು ತಿಳಿಸಿದರು‌

ಪ್ರವಾಸಿಗರ ಜತೆ ಸಮಾಲೋಚನೆ

ಹಂಪಿಗೆ ಬೇಟಿ ನೀಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ದೇಶ-ವಿದೇಶಿ ಪ್ರವಾಸಿಗರ ಜತೆ ಸಮಾಲೋಚನೆ ನಡೆಸಿದರು. ಮಹಾ ನವಮಿ ದಿಬ್ಬ, ಹಜರಾಮ ದೇಗುಲ, ಕಮಲ್ ಮಾಹಲ್ ಬಳಿ ಇದ್ದ ಪ್ರವಾಸಿಗರಿಗೆ ಇಲ್ಲಿನ ಸ್ನಾರಕಗಳು ಹಾಗೂ ಇಲ್ಲಿ ಸೌಕರ್ಯಗಳ ಬಗ್ಗೆ ಅಭಿಪ್ರಾಯ ಕೇಳಿದರು. ಇದಕ್ಕೆ ಪ್ರವಾಸಿಗರು ಇಲ್ಲಿ ಸ್ಮಾರಕಗಳು ಅದ್ಬುತವಾಗಿವೆ. ಆದರೆ, ಇಲ್ಲಿನ ವ್ಯವಸ್ಥೆ ಮಾತ್ರ ಹದಗೆಟ್ಟಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಹಂಪಿ ಪ್ರವಾಸೋದ್ಯಮ ಬೆಳೆಸಲಾಗುತ್ತದೆ ಎಂದು‌ ಭರವಸೆ ನೀಡಿದರು.
ಪ್ರವಾಸೋದ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ‌.ತ್ರೀಲೋಕ ಚಂದ್ರ, ಡಿಸಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಶಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net