ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೆಯ ಊರಿನ ಶ್ರೀ ನೀಲಕಂಠೇಶ್ವರ ದೇಗುಲದ ಆವರಣದಲ್ಲಿ ನೇಕಾರ ಸಮುದಾಯಗಳ ತಾಲೂಕು ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಿಕಟಪೂರ್ವ ಅಧ್ಯಕ್ಷ ಜಾಣ ಶಿವಾನಂದ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಗೋಟೂರು ಬಸವರಾಜ್ (ಅಧ್ಯಕ್ಷ), ಜಾಣ ಶ್ರೀನಿವಾಸ (ಉಪಾಧ್ಯಕ್ಷ), ವಕೀಲ ನರೇಂದ್ರಬಾಬು (ಪ್ರಧಾನ ಕಾರ್ಯದರ್ಶಿ), ಪಿ.ಕೃಷ್ಣಮೂರ್ತಿ(ಸಹ ಕಾರ್ಯದರ್ಶಿ), ಎನ್.ಜಿ.ವಿರೂಪಾಕ್ಷಪ್ಪ (ಖಜಾಂಚಿ), ಕೋಣೆ ವೀರಣ್ಣ ಸಂಘಟನಾ ಕಾರ್ಯದರ್ಶಿ ಹಾಗೂ 15 ಜನ ನಿರ್ದೇಶಕರನ್ನು ಆಯ್ಕೆಮಾಡಲಾಯಿತು.
ಪದ್ಮಶಾಲಿ ಸಮಾಜದ ತಾಲೂಕು ಅಧ್ಯಕ್ಷ ಜಾಣ ಅನಿಲ್ ಮಾತನಾಡಿ, ನೇಕಾರ ಸಮುದಾಯದಲ್ಲಿ ಕುರುಹಿನ ಶೆಟ್ಟಿ, ದೇವಾಂಗ, ಪದ್ಮಶಾಲಿ ಸಮುದಾಯಗಳನ್ನೊಳಗೊಂಡು ಏಳು ಒಳ ಪಂಗಡಗಳಿದ್ದು, ಈ ಎಲ್ಲ ಒಳ ಪಂಗಡಗಳ ಒಕ್ಕೂಟ ರಚಿಸಲಾಗಿದೆ ಎಂದರು.
ಕುರುಹಿನಶೆಟ್ಟಿ ಸಮಾಜದ ತಾಲೂಕು ಅಧ್ಯಕ್ಷ ಮಾಲವಿ ಮಲ್ಲಣ್ಣ ಮಾತನಾಡಿ, ಒಕ್ಕೂಟದ ಪದಾಧಿಕಾರಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಸಮುದಾಯವನ್ನು ಬಲಪಡಿಸಬೇಕೆಂದು ತಿಳಿಸಿದರು.