ಅರಣ್ಯ ಅತಿಕ್ರಮಣವೆ ವನ್ಯಜೀವಿಗಳ ಸಂಘರ್ಷಕ್ಕೆ ಕಾರಣ

ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಮಾತನಾಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಗಾರ ಉದ್ಘಾಟಿಸಿ ನ್ಯಾಯಾಧೀಶ ಆರ್.ನಟರಾಜ್ ಅಭಿಪ್ರಾಯ
ಹೊಸಪೇಟೆ: ಭೂಮಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಕೃತಿಯ ಭಾಗವಾಗಿರುವ ಪ್ರತಿಯೊಂದು ಜೀವಿಯ ಹಕ್ಕುವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಹೇಳಿದರು.
ಜಿಲ್ಲಾ ನ್ಯಾಯಾಂಗ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ತಾಲೂಕಿನ ಕಮಲಾಪುರದ ದರೋಜಿ ಕರಡಿ ಸಂರಕ್ಷಣಾ ಪ್ರದೇಶದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಾನವ ಮತ್ತು ವನ್ಯಜೀವಿಗಳ (ಕಾರಣಗಳು, ಸವಾಲುಗಳು ಮತ್ತು ಪರಿಹಾರ) ಸಂಘರ್ಷದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯುನು ಅರಣ್ಯವನ್ನು ಆಕ್ರಮಿಸಿಕೊಂಡು ವಸತಿ ಪ್ರದೇಶಗಳು, ರಸ್ತೆಗಳು ಮತ್ತು ಕೃಷಿ ಭೂಮಿಯನ್ನು ವಿಸ್ತರಿಕೊಳ್ಳುತ್ತಿದ್ದಾನೆ. ಇದರಿಂದ ವನ್ಯಜೀವಿಗಳಿಗೆ ಇರಲು ಜಾಗವಿಲ್ಲದೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುವುದೆ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಅರಣ್ಯದ ನಡುವೆ ಹಾದುಹೋಗುವ ಹೆದ್ದಾರಿಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಪ್ರಾಣಿಗಳ ಸಾಂಪ್ರದಾಯಿಕ ಚಲನೆಯ ಮಾರ್ಗಗಳನ್ನು ತಡೆಹಿಡಿಯುತ್ತವೆ. ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಿಸಬೇಕು. ಅರಣ್ಯದಂಚಿನಲ್ಲಿ ಕಂದಕ, ಸೌರಶಕ್ತಿ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್‌ಗಳಂತಹ ಪರಿಣಾಮಕಾರಿ ತಡೆಗೋಡೆಗಳನ್ನು ನಿರ್ಮಿಸಬೇಕು. ನಷ್ಟ ಮತ್ತು ಜೀವ ಹಾನಿ ಸಂಭವಿಸಿದಾಗ ಸರ್ಕಾರವು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಪರಿಹಾರ ಧನ ನೀಡಬೇಕು. ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನೊಳಗೆಯೇ ನೀರು ಮತ್ತು ಆಹಾರ ಸಿಗುವಂತೆ ಮಾಡಬೇಕು ಎಂದÀರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಕೆ.ಜಿ.ಶಾಂತಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್, ವಿಜಯನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮ,ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net